ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಖೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸುಖೇಶ್ ನನಗೆ ಮೋಸ ಮಾಡಿದ್ದಾನೆ ಎಂದು ಜಾಕ್ವೆಲಿನ್ ಕೋರ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಸುಖೇಶ್ ನನ್ನ ಜೀವನವನ್ನು ನರಕ ಮಾಡಿದ. ನನ್ನ ಭಾವನೆಗಳ ಜತೆ ಆಟ ಆಡಿದ್ದಾನೆ. ನನ್ನ ಲೈಫ್ ಹಾಳು ಮಾಡಿದ್ದಾನೆ ಎಂದು ಹೇಳಿದ್ದಾರೆ.
ಪಿಂಕಿ ಇರಾನಿಯಿಂದ ಸುಖೇಶ್ ಪರಿಚಯ ಆಗಿತ್ತು. ನಾನು ಸನ್ ಟಿವಿ ಮಾಲೀಕ, ಜಯಲಲಿತಾ ನನ್ನ ಚಿಕ್ಕಮ್ಮ ಎಂದು ಸುಖೇಶ್ ಹೇಳಿದ್ದ. ತುಂಬಾ ಪ್ರಾಜೆಕ್ಟ್‌ಗಳಿಗೆ ನಿಮ್ಮ ಸಾಥ್ ಬೇಕು, ನಾನು ಅಭಿಮಾನಿ ಎಂದು ಹೇಳಿ ಹಾದಿ ತಪ್ಪಿಸಿದ. ನನ್ನ ವೃತ್ತಿಜೀವನ, ವೈಯಕ್ತಿಯ ಜೀವನ ಎಲ್ಲವನ್ನು ಹಾಳು ಮಾಡಿದ್ದಾನೆ.
ಅವನು ಅರೆಸ್ಟ್ ಆದ ನಂತರವೇ ಅವನ ನಿಜವಾದ ಹೆಸರು ನನಗೆ ತಿಳಿದಿದ್ದು. ಪಿಂಕಿಗೆ ಎಲ್ಲವೂ ಗೊತ್ತಿದ್ದೂ ನನಗೆ ಹೇಳಿರಲಿಲ್ಲ. ಅವಳೂ ನನಗೆ ಮೋಸ ಮಾಡಿದ್ದಳು ಎಂದು ಜಾಕ್ವೆಲಿನ್ ಭಾವುಕರಾಗಿದ್ದಾರೆ.