ಬಿಜೆಪಿಗೆ ಸುಮಲತಾ ಅಂಬರೀಶ್ ಬೆಂಬಲ: ಹೆಚ್​ಡಿ ಕುಮಾರಸ್ವಾಮಿ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತನ್ನ ಪೂರ್ಣ ಬೆಂಬಲ ಬಿಜೆಪಿಗೆ (BJP) ಎಂದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh)​ ಹೇಳಿಕೆಗೆ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದು, ಸುಮಲತಾ ಅಂಬರೀಶ್ ಬಿಜೆಪಿಗೆ (BJP) ಬೆಂಬಲ ಸೂಚಿಸಿದ್ದಕ್ಕೆ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ್ದು ಮತ್ತು ಅವರ ಹೇಳಿಕೆಗಳಿಗೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ಅವರು ದೊಡ್ಡವರು, ದೊಡ್ಡ ಪಕ್ಷಕ್ಕೆ ಸೇರುತ್ತಿದ್ದಾರೆ. ಅವರು ಸುಮಲತಾ ಅಭಿವೃದ್ಧಿ ಕೆಲಸ ಮಾಡಿದ್ದರೆ ಮಂಡ್ಯ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.

ಸ್ವಾರ್ಥಕ್ಕಾಗಿ ನನ್ನ ದೇಹ ದಂಡನೆ ಮಾಡುತ್ತಿಲ್ಲ. ಮುಖ್ಯಮಂತ್ರಿ ಆಗಬೇಕು ಎಂದು ಈ ರೀತಿ ಶ್ರಮ ವಹಿಸುತ್ತಾ ಇಲ್ಲ. ನಮ್ಮ ಮನೆಯ ಬಳಿ ಬರುವ‌ ಬಡ ತಾಯಂದಿರ ಕಣ್ಣೀರು ನೋಡಿದ್ದೇನೆ. ಬಡವರ, ರೈತರ ಕಣ್ಣೀರು ಒರೆಸಬೇಕು ಎನ್ನುವುದೊಂದೇ ನನ್ನ ಉದ್ದೇಶ. ಹಣವೇ ಮುಖ್ಯ ಎನ್ನುವವರಿಗೆ ಪಾಪ ಪ್ರಜ್ಞೆ ಕಾಡುವುದಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಜನರಿಗೆ ನೆಮ್ಮದಿಯ ಬದುಕು ಒದಗಿಸಲು ಆಗಿಲ್ಲ. ಮುಖ್ಯಮಂತ್ರಿ ಬಳಿ ಆಗಲೀ ಕಾಂಗ್ರೆಸ್ ನಾಯಕರ ಬಳಿಯಾಗಲೀ ಜನರು ಕಷ್ಟ ಹೇಳಿಕೊಳ್ಳುವುದಕ್ಕಾಗುತ್ತಿಲ್ಲ. ಆದರೆ, ನೀವು ಬೆಳೆಸಿರುವ ಮಗನಾದ ನಾನು ನಿಮ್ಮ ಬಳಿಗೇ ಬರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!