ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ತಂಪು ನೀಡುವ ಪಾನೀಯಗಳಲ್ಲಿ ಬೊಂಡ ಶರಬತ್ ವಿಶೇಷ ಸ್ಥಾನ ಹೊಂದಿದೆ. ಎಳನೀರು, ನಿಂಬೆಹಣ್ಣು ಮತ್ತು ಸ್ವಲ್ಪ ಸಿಹಿಯ ಸವಿಯೊಂದಿಗೆ ತಯಾರಾಗುವ ಈ ಪಾನೀಯ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ತಾಜಾತನವನ್ನು ಕೂಡ ಕೊಡುತ್ತದೆ. ಮಂಗಳೂರು-ಉಡುಪಿ ಭಾಗದಲ್ಲಿ ಇದು ತುಂಬಾ ಜನಪ್ರಿಯ.
ಬೇಕಾಗುವ ಪದಾರ್ಥಗಳು:
ಎಳನೀರು – 2
ಎಳನೀರಿನ ಗಂಜಿ – ಸ್ವಲ್ಪ
ನಿಂಬೆಹಣ್ಣಿನ ರಸ – 1 ರಿಂದ 2 ಚಮಚ
ಸಕ್ಕರೆ ಅಥವಾ ಜೇನುತುಪ್ಪ – 2 ರಿಂದ 3 ಚಮಚ
ಉಪ್ಪು – ಒಂದು ಚಿಟಿಕೆ
ಪುದೀನಾ ಎಲೆ – ಸ್ವಲ್ಪ
ಐಸ್ ತುಂಡುಗಳು – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಎಳನೀರನ್ನು ಒಂದು ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ. ಬಳಿಕ ಎಳನೀರಿನ ಗಂಜಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಸೇರಿಸಿ. ನಂತರ ನಿಂಬೆಹಣ್ಣಿನ ರಸ, ಸಕ್ಕರೆ ಅಥವಾ ಜೇನುತುಪ್ಪ ಮತ್ತು ಒಂದು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಕಲಸಿ.
ಇದಕ್ಕೆ ಪುದೀನಾ ಎಲೆಗಳನ್ನು ಸೇರಿಸಿದರೆ ಇನ್ನಷ್ಟು ಸುವಾಸನೆ ಬರುತ್ತದೆ. ಕೊನೆಯಲ್ಲಿ ಐಸ್ ತುಂಡುಗಳನ್ನು ಹಾಕಿ ತಣ್ಣಗೆ ಸರ್ವ್ ಮಾಡಿ.
ತಂಪು ತಂಪಾದ ಬೊಂಡ ಶರಬತ್ ಕುಡಿದರೆ ಬಿಸಿಲಿನ ಬೇಗೆಯೇ ಮರೆಯಾಗುತ್ತದೆ.



