April 22, 2026
Wednesday, April 22, 2026
spot_img

BEAUTY | ಬೇಸಿಗೆಯಲ್ಲಿ ಲೈಟ್‌ ಆಗಿರಲಿ ಮೇಕಪ್‌, ಈ ಸ್ಟೆಪ್ಸ್‌ ಫಾಲೋ ಮಾಡಿದ್ರೆ ಬ್ಯೂಟಿಫುಲ್‌ ಆಗಿ ಕಾಣ್ತೀರಿ

ಬೇಸಿಗೆಯಲ್ಲಿ ಮೇಕಪ್‌ ಮಾಡೋದು ತುಂಬಾನೇ ಕಷ್ಟ. ಮೇಕಪ್‌ ಐದು ನಿಮಿಷವೂ ಮುಖದ ಮೇಲೆ ನಿಲ್ಲೋದಿಲ್ಲ. ಇದರ ಬದಲು ಏನೂ ಹಚ್ಚದೇ ಹಾಗೆ ಹೋಗೋದು ಬೆಸ್ಟ್‌ ಎನಿಸಿಬಿಡಬಹುದು. ಆದರೆ ಮೇಕಪ್‌ ಮಾಡಿದ ಮುಖಕ್ಕೂ ಮೇಕಪ್‌ ಇಲ್ಲದ ಮುಖಕ್ಕೂ ವ್ಯತ್ಯಾಸ ಇದೆ. ಮೇಕಪ್‌ ಹೇಗೆ ಮಾಡಬೇಕು? ಯಾವ ಪ್ರಾಡಕ್ಟ್‌ ನಂತರ ಯಾವ ಪ್ರಾಡಕ್ಟ್‌ ಹಚ್ಚಬೇಕು? ಇಲ್ಲಿದೆ ಡೀಟೇಲ್ಸ್‌..

೧. ಮೊದಲು ಸೋಪ್‌ ಅಥವಾ ಫೇಸ್‌ವಾಶ್‌ನಿಂದ ಮುಖ ತೊಳೆದುಕೊಳ್ಳಿ

೨. ನಂತರ ಮುಖಕ್ಕೆ ಸೆರಮ್‌ ಹಚ್ಚಿ,ಪ್ರತೀ ಸ್ಟೆಪ್‌ನ ನಂತರ ಒಂದು ನಿಮಿಷವಾದ್ರೂ ಬಿಡಿ ನಂತರ ಬೇರೆಯ ಪ್ರಾಡಕ್ಟ್‌ ಹಚ್ಚಿ.

೩. ಸೆರಮ್‌ ನಂತರ ನಿಮ್ಮಿಷ್ಟದ ಮಾಯಿಶ್ಚರೈಸರ್‌ ಹಚ್ಚಿ.

೪. ನಂತರ ಎರಡು ಬೆರಳಿನಷ್ಟು ಸನ್‌ಸ್ಕ್ರೀನ್‌ ಹಚ್ಚಿಕೊಂಡು ಒಂದೆರಡು ನಿಮಿಷ ಬಿಡಿ

೫. ಆನಂತರ ಮುಖಕ್ಕೆ ಪ್ರೈಮರ್‌ ಹಚ್ಚಿ, ಪ್ರೈಮರ್‌ ನಿಮ್ಮ ಮುಖದಲ್ಲಿರುವ ಪೋರ್ಸ್‌ನ್ನು ಮುಚ್ಚಿ, ಬೇಸ್‌ ನೀಡುತ್ತದೆ.


೬. ಆಮೇಲೆ ಕಣ್ಣ ಕೆಳಗಿನ ಡಾರ್ಕ್‌ ಸರ್ಕಲ್‌ ಹಾಗೂ ಮುಖದ ಮೇಲಿರುವ ಕಲೆಗಳಿಗೆ ಕಲರ್‌ ಕರೆಕ್ಟರ್‌ ಹಚ್ಚಿ

೭ ಆನಂತರವೇ ಕನ್ಸೀಲರ್‌ ಹಚ್ಚಿ ನಿಮ್ಮ ಕಪ್ಪು ಕಲೆಗಳನ್ನು ಮುಚ್ಚಿಬಿಡಿ

೮ ಆಮೇಲೆ ಉಳಿದ ಜಾಗಕ್ಕೆ ಫೌಂಡೇಷನ್‌/ಬಿಬಿ ಕ್ರೀಮ್‌, ಸ್ಕಿನ್‌ ಟಿಂಟ್‌ ಹಾಕಿ ಬ್ರಶ್‌ನಲ್ಲಿ ಬ್ಲೆಂಡ್‌ ಮಾಡಿ

೯ ಆನಂತರ ಮುಖ ಹಾಗೂ ಮೂಗಿನ ಶೇಪ್‌ ಚಿಕ್ಕದಾಗಿ ಕಾಣಿಸೋಕೆ ಕಾಂಟಾರ್‌ ಮಾಡಿ

೧೦ ಆಮೇಲೆ ಇಷ್ಟವಿದ್ದಲ್ಲಿ ಕೆನ್ನೆಯ ಮೇಲೆ ಬ್ಲಶ್‌ ಹಚ್ಚಿಕೊಳ್ಳಬಹುದು, ಮೂಗಿನ ತುದಿಯನ್ನು ಹೈಲೈಟ್‌ ಮಾಡೋದಕ್ಕೆ ಹೈಲೈಟರ್‌ ಕೂಡ ಬಳಸಬಹುದು.

ಇದಾದ ನಂತರ ನಿಮ್ಮಿಷ್ಟದ ಲಿಪ್‌ ಲೈನರ್‌, ಐಬ್ರೋ ಪೆನ್ಸಿಲ್‌, ಐ ಲೈನರ್‌, ಲಿಪ್ಸ್‌ಟಿಕ್‌ ಹಚ್ಚಿ ಕಡೆಗೆ ಮೇಕಪ್‌ ಸ್ಪ್ರೇ ಹೊಡೆದುಕೊಂಡರೆ ನಿಮ್ಮ ಮೇಕಪ್‌ ಕಂಪ್ಲೀಟ್‌ ಆಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !