ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ಗೋಪುರದ ಮೂಲಕ ಸೂರ್ಯ ಹಾದು ಹೋಗುವ ದೃಶ್ಯ ಯಾವ ವಿಸ್ಮಯಕ್ಕೂ ಕಡಿಮೆ ಇಲ್ಲ.
ವಿಷ್ಣು ದೇವರ ಈ ದೇವಾಲಯ ಕೇರಳ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಸಮ್ಮಿಲನವಾಗಿದೆ. ಪ್ರತಿ ವರ್ಷ ವಿಷುವತ್ ಸಂಕ್ರಾಂತಿ ದಿನ ಈ ದೃಶ್ಯ ಕಾಣಸಿಗಲಿದೆ. ಇದನ್ನು ವೀಕ್ಷಿಸಲು ಸಾವಿರಾರು ಭಕ್ತರು ಮುಗಿಬೀಳುತ್ತಾರೆ. ವರ್ಷಕ್ಕೆ ಎರಡು ಬಾರಿ ಈ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಗೋಪುರಕ್ಕೆ ಐದು ಕಿಂಡಿಗಳಿದ್ದು, ಮೂರನೇ ಕಿಂಡಿಯಲ್ಲಿ ಸೂರ್ಯ ಕಾಣುತ್ತಾನೆ