ಇನ್ನೇನು ಕೆಲವೇ ದಿನದಲ್ಲಿ ಭೂಮಿಗೆ ಬರಬೇಕಿದ್ದ ಸುನೀತಾ ವಿಲಿಯಮ್ಸ್‌ಗೆ ನಿರಾಸೆ, ಸಮಸ್ಯೆ ಏನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ರನ್ನು ಭೂಮಿಗೆ ಮರಳಿ ಕರೆತರುವ ಯೋಜನೆಗೆ ಮತ್ತೆ ಅಡ್ಡಿಯಾಗಿದೆ. ಹೌದು! ಎಲಾನ್ ಮಸ್ಕ್ ಸ್ಪೇಸ್‌ಎಕ್ಸ್ ಕಂಪನಿ ಹೈಡ್ರಾಲಿಕ್ ಸಮಸ್ಯೆಯಿಂದಾಗಿ ತನ್ನ ಕ್ರೂ-10 ಉಡಾವಣೆಯನ್ನು ಮುಂದೂಡಿದೆ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ರನ್ನು ಭೂಮಿಗೆ ಕರೆತಂದು ಅವರ ಬದಲಾಗಿ ಹೊಸ ತಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಬೇಕಿತ್ತು. ಆದರೆ ಫಾಲ್ಕನ್ ರಾಕೆಟ್‌ನ ಉಡಾವಣೆಗೆ ಕೆಲವೇ ಗಂಟೆಗಳು ಇರುವಾಗ ಪ್ರಮುಖ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ತಂಡ ಬದಲಾವಣೆಯಾಗದೆ ಉಳಿದಿದೆ.

ಮುಂದಿನ ಪ್ರಯತ್ನ ಗುರುವಾರ ರಾತ್ರಿಯೊಳಗೆ ನಡೆಯಬಹುದು ಎಂದು ಹೇಳಲಾಗಿದೆ. ಅಮೆರಿಕ, ಜಪಾನ್ ಮತ್ತು ರಷ್ಯಾದ ಹೊಸ ತಂಡವು ಜೂನ್‌ನಿಂದ ಅಲ್ಲಿರುವ ವಿಲ್ಮೋರ್ ಮತ್ತು ವಿಲಿಯಮ್ಸ್ ಅವರನ್ನು ಬದಲಾಯಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!