CINE | ಐಫಾ ಅವಾರ್ಡ್ಸ್‌ನಲ್ಲಿ ಈ ಬಾರಿ ಸೋನು ನಿಗಮ್‌ ಹಾಡಿದ ಹಾಡು ನಾಮಿನೇಟ್‌ ಕೂಡ ಆಗಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭೂಲ್‌ ಭುಲಯ್ಯ 3 ಸಿನಿಮಾದ ಮೇರೆ ಡೋಲನಾ 3.0 ಹಾಡು ಜನರ ಮನಸ್ಸನ್ನು ಗೆದ್ದಿದೆ. ಸೋನು ನಿಗಮ್‌ ಹಾಡಿದ ಈ ಹಾಡು ಎಲ್ಲರ ಪ್ಲೇಲಿಸ್ಟ್‌ನಲ್ಲಿ ಮೊದಲನೆಯದ್ದಾಗಿತ್ತು. ಆದರೂ ಐಫಾ ಅವಾರ್ಡ್ಸ್‌ನ ಬೆಸ್ಟ್‌ ಸಿಂಗರ್‌ ಕೆಟಗರಿಯಲ್ಲಿ ಸೋನು ನಿಗಮ್‌ ಹೆಸರು ಕೂಡ ಇಲ್ಲ.

ಇದು ಸೋನು ನಿಗಮ್‌ಗೆ ಬೇಸರ ಉಂಟು ಮಾಡಿದೆ. ನನಗೆ ಅವಾರ್ಡ್‌ ಕೊಡೋದು ಬೇಡ ಬಟ್‌ ಬೆಸ್ಟ್‌ ಸಾಂಗ್‌ ಕೆಟಗೆರಿಯಲ್ಲಾದ್ರೂ ಈ ಹಾಡು ಇರಬೇಕಿತ್ತು. ಎಷ್ಟು ಜನರ ಮೆಚ್ಚಿಗೆ ಪಡೆದ ಹಾಡಿದು.

IIFA ನಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ ವಿಭಾಗದಲ್ಲಿ ಅರಿಜಿತ್ ಸಿಂಗ್, ಕರಣ್ ಔಜ್ಲಾ, ದಿಲ್ಜಿತ್ ದೋಸಾಂಜ್, ಬಾದ್‌ಶಾ, ಜುಬಿನ್ ನೌಟಿಯಾಲ್ ಮತ್ತು ಮಿತ್ರಜ್ ನಾಮನಿರ್ದೇಶನಗೊಂಡರು. ಅವರಲ್ಲಿ, ಜುಬಿನ್ ನೌಟಿಯಾಲ್ ಈ ಪ್ರಶಸ್ತಿಯನ್ನು ಗೆದ್ದರು.

ಬುಧವಾರ, ಪ್ರಶಸ್ತಿ ಪ್ರದಾನ ಸಮಾರಂಭದ ನಂತರ, ಸೋನು ನಿಗಮ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾಮನಿರ್ದೇಶನ ಪಟ್ಟಿಯ ಸ್ಕ್ರೀನ್​ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅವರು ವ್ಯಂಗ್ಯವಾಗಿ ಬರೆದಿದ್ದಾರೆ, ‘ಧನ್ಯವಾದಗಳು IIFA..  ನೀವು ರಾಜಸ್ಥಾನದ ಅಧಿಕಾರಶಾಹಿಗೆ ಜವಾಬ್ದಾರರಾಗಿರುತ್ತೀರಿ’. ಅಷ್ಟೇ ಅಲ್ಲ, ಅವರು ಈ ಪೋಸ್ಟ್‌ನ ಹಿನ್ನೆಲೆಯಲ್ಲಿ ತಮ್ಮ ‘ಮೇರೆ ಡೋಲನಾ 3.0′ ಹಾಡನ್ನು ಕೂಡ ಹಾಕಿದ್ದಾರೆ. ಈ ಹಾಡಿಗೆ ಕನಿಷ್ಠ ನಾಮನಿರ್ದೇಶನವಾದರೂ ಸಿಗಬೇಕಿತ್ತು ಎಂದು ಅವರು ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!