ಸನ್ ರೈಸರ್ಸ್ ಒಡತಿ ಕಾವ್ಯ ಮಾರನ್‍ಗೆ ಬಂತು ಮದುವೆ ಪ್ರಸ್ತಾಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ಫ್ರಾಂಚೈಸ್ ಮಾಲೀಕ ಕಲಾನಿಧಿ ಮಾರನ್ ಅವರ ಮಗಳು ಕಾವ್ಯ ಮಾರನ್ (Kaviya Maran) ಎಲ್ಲರಿಗು ನೋಡಿ ಪರಿಚಯ ಇದ್ದೆ ಇರುತ್ತೆ. ಪ್ರತಿ ಬಾರಿಯೂ ಐಪಿಎಲ್‍ನ (IPL) ಬಿಡ್ಡಿಂಗ್ ವೇಳೆ ಹಾಗು ಮ್ಯಾಚ್ ವೇಳೆ ತಮ್ಮ ಲುಕ್ ಮೂಲಕ ಎಲ್ಲರ ಗಮನಸೆಳೆಯುತ್ತಾರೆ.

ಈ ವೇಳೆಯೇ ಅನೇಕರು ಕಾವ್ಯ ಅವರ ನೋಟಕ್ಕೆ ಫಿದಾ ಆಗಿದ್ದಾರೆ . ಇದೀಗ ದಕ್ಷಿಣ ಆಫ್ರಿಕಾದಲ್ಲೂ ಅಭಿಮಾನಿ ಕಾವ್ಯ ಮುಂದೆ ವಿಶೇಷ ಬೇಡಿಕೆಯೊಂದನ್ನು ಇಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಟಿ20 ಲೀಗ್‍ನಲ್ಲಿ ಆಡುತ್ತಿರುವ ತಂಡ ಸನ್‍ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಸಹಮಾಲೀಕರಾದ ಕಾವ್ಯ ಮಾರನ್‍ರನ್ನು ನೋಡಿ ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕನೋರ್ವ Will You Marry Me ಎಂಬ ಪೋಸ್ಟರ್ ಹಿಡಿದು ಮದುವೆ ಪ್ರಸ್ತಾಪವಿಟ್ಟಿದ್ದಾನೆ. ಈ ಮೂಲಕ ಇಂಟರ್‌ನ್ಯಾಷನಲ್‌ ಕ್ರಶ್ ಆಗಿದ್ದಾರೆ.

ಕಾವ್ಯ ಮಾರನ್ ಅವರ ತಂದೆ ಕಲಾನಿಧಿ ಮಾರನ್ ಅವರು ಸನ್ ಟಿವಿ ನೆಟ್‍ವರ್ಕ್‍ನ ಮಾಲೀಕರಾಗಿದ್ದು, ಟಿವಿ ಚಾನೆಲ್ ಮತ್ತು ಎಫ್‍ಎಂ ಚಾನೆಲ್ ಹೊಂದಿದ್ದಾರೆ. ಕಾವ್ಯ ಮಾರನ್ ಚೆನ್ನೈನ ಸ್ಟೆಲಿಯಾ ಮಾರಿಸ್ ಕಾಲೇಜಿನಲ್ಲಿ ಬಿಕಾಂ ಪದವಿ ಬಳಿಕ ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಎಂಬಿಎ ಮುಗಿಸಿದ್ದಾರೆ. ಆ ನಂತರ ತಮ್ಮ ಸನ್ ಟಿವಿಯಲ್ಲೇ ಒಂದು ವರ್ಷ ಕೆಲಸ ಮಾಡಿ, ಸನ್ ಟಿವಿ ನೆಟ್‍ವರ್ಕ್ ಬೋರ್ಡಿನ ನಿರ್ದೇಶಕರಾಗಿದ್ದಾರೆ. ಐಪಿಎಲ್ ಫ್ರಾಂಚೈಸ್‍ನ ಸಹ ಮಾಲಕಿಯಾಗಿ ಉದ್ಯಮ ಜೊತೆ ಕ್ರೀಡಾ ರಂಗದಲ್ಲಿ ಮಿಂಚುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!