ದಿಗಂತ ವರದಿ ಕಾರವಾರ :
ಕಾಳಿನದಿ ಯೋಜನೆ 1ನೇ ಹಂತ ಸೂಪಾ ಆಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ 10 ,710 ಕ್ಯೂಸೆಕ್ ಪ್ರವಾಹದ ನೀರನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಹೊರ ಬಿಡಲಾಗಿದೆ.
ಸತತ ಮಳೆಯಿಂದಾಗಿ ಸೂಪಾ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಲ್ಲಿದ್ದು, ಸೂಪಾ ಜಲಾಶಯದ ಗರಿಷ್ಠ ಮಟ್ಟ 564.00 ಮೀಟರ್(ಸಮುದ್ರ ಮಟ್ಟದಿಂದ) ಆಗಿದ್ದು ಆ.27ರಂದು ಬೆಳಿಗ್ಗೆ 10 ಗಂಟೆಗೆ ಜಲಾಶಯದಲ್ಲಿ ನೀರಿನ ಮಟ್ಟ 559.79 ಮೀ ತಲುಪಿದರ. ಆದ್ದರಿಂದ ಆಣೆಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನುಹೊರ ಬಿಡಲಾಗಿದೆ.
ಸೂಪಾ ಜಲಾಶಯದ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ, ಜಾನುವಾರು ಹಾಗೂ ಪ್ರಾಣ ಹಾನಿ ಬಗ್ಗೆ ಎಚ್ಚರ ವಹಿಸಿ, ಮುಂಜಾಗೃತೆಯಾಗಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ