ಬಾನಿನಲ್ಲಿ ʻಸೂಪರ್ ಬ್ಲೂ ಮೂನ್ʼ: ವಿಶಿಷ್ಟ ವಿದ್ಯಮಾನಕ್ಕೆ ಮನಸೋತ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಕಾಶದಲ್ಲಿ ಸೂಪರ್ ಬ್ಲೂ ಮೂನ್ ಎಂಬ ವಿಶಿಷ್ಟ ವಿದ್ಯಮಾನ ಕಂಡು ಜನ ಪುಳಕಿತರಾದರು. ನಿನ್ನೆ ರಾತ್ರಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಸೂಪರ್‌ ಬ್ಲೂ ಮೂನ್‌ ಗೋಚರಿಸಿದ್ದು, ವಿವಿಧ ಪ್ರದೇಶಗಳಲ್ಲಿ ಹೇಗೆ ಕಂಡಿದೆ ಎಂಬುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸೂಪರ್ ಬ್ಲೂ ಮೂನ್‌ಗಳು ಸರಾಸರಿ 10 ವರ್ಷಗಳಿಗೊಮ್ಮೆ ಸಂಭವಿಸುತ್ತವೆ ಎಂದು ನಾಸಾ ತಿಳಿಸಿದೆ. ಮುಂದಿನ ಸೂಪರ್ ಬ್ಲೂ ಮೂನ್ ಜನವರಿ 2037 ರವರೆಗೆ ಮತ್ತೆ ಗೋಚರ ಆಗುವುದಿಲ್ಲ. ರಾತ್ರಿ ಕಂಡ ಈ ವಿಸ್ಮಯಕಾರಿ ಘಟನೆಯನ್ನು ನಾಸಾ ಟ್ವೀಟ್‌ ಮಾಡಿದೆ. ದೇಶದ ವಿವಿಧೆಡೆ ಆಗಸದಲ್ಲಿ ಚಂದ್ರಮ ಹೇಗೆ ಕಂಡ ಎಂಬುದನ್ನು ನೀವೂ ಕಣ್ತುಂಬಿಕೊಳ್ಳಿ.

ಭೂಮಿಗೆ ಹತ್ತಿರ ಬಂದಾಗ, ಚಂದ್ರನು ಆಕಾಶದಲ್ಲಿ ಹೆಚ್ಚು ದೊಡ್ಡದಾಗಿ ಕಾಣುತ್ತಾನೆ. ಪರಿಣಾಮವಾಗಿ, ಇದನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ.

ಅಸ್ಸಾಂನ ಗುವಾಹಟಿಯ ಸೂಪರ್ ಬ್ಲೂ ಮೂನ್‌ನ ದೃಶ್ಯಗಳು ನಿಜಕ್ಕೂ ಅಪರೂಪದ ದೃಶ್ಯವಾಗಿತ್ತು.

ಅದೇ ರೀತಿ ಕೋಲ್ಕತ್ತಾದಲ್ಲಿ ಸೂಪರ್ ಬ್ಲೂ ಮೂನ್ ನೋಡಲು ಎಲ್ಲರೂ ಉತ್ಸುಕರಾಗಿದ್ದರು.

ಬಿಹಾರದ ದೃಶ್ಯಗಳೂ ಎಲ್ಲರನ್ನೂ ಬೆರಗುಗೊಳಿಸಿದವು.

ಲಕ್ನೋದಿಂದಲೂ ಬಾನಿನಲ್ಲಿ ಅದ್ಭುತ ದೃಶ್ಯ ಕಂಡು ಬಂತು.

ಪಿಟಿಐ ಸೂಪರ್‌ ಬ್ಲೂ ಮೂನ್‌ ಸುಂದರ ದೃಶ್ಯವನ್ನು ಸೆರೆಹಿಡಿದು ದೃಶ್ಯವನ್ನು ಹಂಚಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!