ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಾರೋಗ್ಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ರಜನಿಕಾಂತ್ ಅವರು ಗುರುವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಚೆನ್ನೈ ಪೊಲೀಸರ ಪ್ರಕಾರ ಅಕ್ಟೋಬರ್ 3 ರಂದು ರಾತ್ರಿ 11 ಗಂಟೆ ಸುಮಾರಿಗೆ ರಜನಿಕಾಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 1 ರಂದು ಅಪೋಲೋ ಹಾಸ್ಪಿಟಲ್ಸ್ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ರಜನಿಕಾಂತ್ ಅವರ ಹೃದಯದಿಂದ ಹೊರಡುವ ಮುಖ್ಯ ರಕ್ತನಾಳದಲ್ಲಿ ಊತವಿತ್ತು, ಇದನ್ನು ಶಸ್ತ್ರಚಿಕಿತ್ಸೆಯಲ್ಲದ, ಟ್ರಾನ್ಸ್‌ಕ್ಯಾಥೆಟರ್ ವಿಧಾನದಿಂದ ಚಿಕಿತ್ಸೆ ನೀಡಲಾಯಿತು.
ಗುರುವಾರ ರಾತ್ರಿ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಅವರು ಚೆನ್ನೈನ ತಿರುವೊಟ್ಟಿಯೂರ್ ಶ್ರೀ ವಡಿವುಡೈ ಅಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ತಂದೆ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.