ಹಳೆಯ ಸ್ನೇಹಿತ ಅಖಿಲೇಶ್ ಯಾದವ್ ರನ್ನು ಭೇಟಿ ಮಾಡಿದ ಸೂಪರ್​ಸ್ಟಾರ್ ರಜನಿಕಾಂತ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶ ಪ್ರವಾಸದಲ್ಲಿರುವ ಸೂಪರ್​ಸ್ಟಾರ್ ರಜನಿಕಾಂತ್ ಅವರು ಭಾನುವಾರ ತಮ್ಮ ಹಳೆಯ ಸ್ನೇಹಿತ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದಾರೆ. ನಾನು 9 ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದೆ ಮತ್ತು ಅಂದಿನಿಂದ ನಾವು ಸ್ನೇಹಿತರಾಗಿದ್ದೇವೆ ರಂದು ಹೇಳಿದ್ದಾರೆ.

ನಾವು ಫೋನ್​ನಲ್ಲಿ ಆಗಾಗ ಮಾತನಾಡುತ್ತೇವೆ. 5 ವರ್ಷಗಳ ಹಿಂದೆ ನಾನು ಚಿತ್ರೀಕರಣಕ್ಕಾಗಿ ಇಲ್ಲಿಗೆ ಬಂದಾಗ ನಾನು ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ, ಈಗ ಅವರು ಇಲ್ಲಿದ್ದಾರೆ, ಆದ್ದರಿಂದ ನಾನು ಅವರನ್ನು ಭೇಟಿಯಾದೆ ಎಂದು ರಜನೀಕಾಂತ್​ ಹೇಳಿಕೊಂಡಿದ್ದಾರೆ.

ಮುಲಾಯಂ ಸಿಂಗ್ ಗೆ ಗೌರವ ಸಲ್ಲಿಸಿದ ರಜನಿಕಾಂತ್ 
ಎಎನ್‌ಐ ಹಂಚಿಕೊಂಡ ಚಿತ್ರಗಳಲ್ಲಿ, ರಜನಿಕಾಂತ್ ಅಖಿಲೇಶ್ ಅವರ ತಂದೆ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಅವರಿಗೆ ಗೌರವ ಸಲ್ಲಿಸಿದರು.

ರಜನೀಕಾಂತ್ ಜೊತೆಗಿರುವ ಫೋಟೋಗಳನ್ನು ಅಖಿಲೇಶ್ ‘ x ‘ನಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!