ಮತ್ತೆ ಹಿಮಾಲಯದತ್ತ ಮುಖ ಮಾಡಿದ ಸೂಪರ್‌ಸ್ಟಾರ್ ರಜನೀಕಾಂತ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಪರ್‌ಸ್ಟಾರ್ ರಜನೀಕಾಂತ್ ‘ಕೂಲಿ’ ಸಿನಿಮಾದ ಶೂಟಿಂಗ್​ ಮುನ್ನ ಅಧ್ಯಾತ್ಮದ ಅನುಭವ ಪಡೆಯಲು ಅವರು ಕೆಲವು ಸ್ಥಳಗಳಿಗೆ ತೆರಳಲಿದ್ದಾರೆ. ಈಗಾಗಲೇ ಕೇದರನಾಥಕ್ಕೆ ಹೋಗಿರುವ ಅವರು ಹಿಮಾಲಯಕ್ಕೂ ಭೇಟಿ ನೀಡಲಿದ್ದಾರೆ.

ಅಲ್ಲಿನ ಗುಹೆಗಳಲ್ಲಿ ಅಧ್ಯಾತ್ಮದ ಹೊಸ ಅನುಭವ ಪಡೆಯಲಿದ್ದಾರೆ. ಅಲ್ಲಿಂದ ವಾಪಸ್​ ಬಂದ ನಂತರ ‘ಕೂಲಿ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗಿದೆ.

ಈ ಬಾರಿಯ ತಮ್ಮ ಅಧ್ಯಾತ್ಮದ ಪಯಣವನ್ನು ಆರಂಭಿಸಲು ರಜನಿಕಾಂತ್​ ಅವರು ಗುರುವಾರ (ಮೇ 30) ಮುಂಜಾನೆಯೇ ಚೆನ್ನೈನಿಂದ ಡೆಹರಾಡೂನ್​ ತಲುಪಿದ್ದಾರೆ. ಡೆಹರಾಡೂನ್​ ವಿಮಾನ ನಿಲ್ದಾಣದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಪ್ರತಿ ವರ್ಷ ನಾನು ಹೊಸ ಅನುಭವ ಪಡೆಯುತ್ತೇನೆ. ಅದರಿಂದ ನನ್ನ ಅಧ್ಯಾತ್ಮದ ಪಯಣ ಮುಂದುವರಿಯುತ್ತದೆ. ಈ ಬಾರಿ ಕೂಡ ನನಗೆ ಹೊಸ ಅನುಭವ ಆಗಲಿದೆ ಅಂತ ನಾನು ನಂಬಿದ್ದೇನೆ’ ಎಂದು ರಜನಿಕಾಂತ್​ ಹೇಳಿದ್ದಾರೆ.

ಇಡೀ ಜಗತ್ತಿಗೆ ಅಧ್ಯಾತ್ಮ ಬೇಕು. ಪ್ರತಿಯೊಬ್ಬ ಮನುಷ್ಯರಿಗೂ ಅದು ಮುಖ್ಯ. ಆಧ್ಯಾತ್ಮಿಕವಾಗಿ ಇರುವುದು ಎಂದರೆ ಶಾಂತಿ, ನೆಮ್ಮದಿಯಿಂದ ಇರುವುದು ಮತ್ತು ದೇವರಲ್ಲಿ ನಂಬಿಕೆ ಇಡುವುದು’ ಎಂದಿದ್ದಾರೆ ರಜನಿಕಾಂತ್​. ಬದ್ರಿನಾಥ್​, ಕೇದಾರನಾಥ್​ ಮುಂತಾದ ಸ್ಥಳಗಳಿಗೆ ತೆರಳುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!