ಸೂಪರ್ ಸ್ಟಾರ್ ರಜನಿಕಾಂತ್ 169ನೇ ಚಿತ್ರದ ಟೈಟಲ್‌ ರಿವೀಲ್! ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ಶೀರ್ಷಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ 169 ನೇ ಚಿತ್ರದ ಟೈಟಲ್‌ ಅನೌನ್ಸ್‌ ಮಾಡಲಾಗಿದ್ದು ರಜನಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ತಮಿಳಿನ ಪ್ರಖ್ಯಾತ ಚಿತ್ರನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಚಿತ್ರಕ್ಕೆ . ಈ ಚಿತ್ರಕ್ಕೆ ಕಾಲಿವುಡ್​ ಟಾಪ್​ ನಿರ್ದೇಶಕ ʼಬೀಸ್ಟ್‌ʼ ಖ್ಯಾತಿಯ ನೆಲ್ಸನ್​ ದಿಲೀಪ್​​ ಕುಮಾರ್ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಇದೀಗ ಪ್ರಜೆಕ್ಟ್‌-169 ಚಿತ್ರದ ಶೀರ್ಷಿಕೆ ಘೋಷಣೆ ಮಾಡಲಾಗಿದೆ. ರಜನಿ ಚಿತ್ರಕ್ಕೆ ‘ಜೈಲರ್’ ಎಂದು ಹೆಸರಿಡಲಾಗಿದೆ.

ರಜನಿಕಾಂತ್ ಅವರ ಹಿಂದಿನ ಚಿತ್ರ ‘ಅನ್ನಾತೆ’ 2021 ರಲ್ಲಿ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದಿತ್ತು.
ಅನಿರುದ್ಧ್ ರವಿಚಂದರ್  ಜೈಲರ್ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಉಳಿದ ಪಾತ್ರವರ್ಗದ ಮಾಹಿತಿಗಳ ಇನ್ನಷ್ಟೇ ತಿಳಿದುಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!