ಹೊಸದಿಗಂತ ವರದಿ, ವಿಜಯಪುರ:
ಅಜಾನ್ ಮೈಕ್ ವಿರುದ್ಧದ ಮುತಾಲಿಕ್ ಅಭಿಯಾನಕ್ಕೆ ನನ್ನ ಬೆಂಬಲ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರ, ಅನುಮತಿ ಇಲ್ಲದೆ ಮೈಕ್ ತೆರವುಗೊಳಿಸಬೇಕು. ಕೋರ್ಟ್ ಆದೇಶ ಪಾಲಿಸಬೇಕಾಗಿರೋದು ಕರ್ನಾಟಕ ಸರ್ಕಾರದ ಧರ್ಮ ಆಗಿದೆ ಎಂದರು.
ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಕ್ರಮವಾಗಬೇಕು. ಮುಖ್ಯಮಂತ್ರಿಗಳು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ