ನವಾಬ್‌ ಮಲ್ಲಿಕ್‌ ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಕ್ರಮ ಹಣವರ್ಗಾವಣೆಯ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಸಚಿವ ನವಾಬ್‌ ಮಲ್ಲಿಕ್ ಜಾಮೀನಿಗಾಗಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ. ಜಾಮೀನು ನೀಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್‌ “ತನಿಖೆಯು ಇನ್ನೂ ಸರಿಯಾಗಿ ಪೂರ್ತಿಯಾಗಿಲ್ಲ, ಈ ಸಂದರ್ಭದಲ್ಲಿ ತನಿಖೆಯ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ. ನೀವು ಸಮರ್ಥವಾಗಿ ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸಿ” ಎಂದು ಹೇಳಿದೆ.

1993 ರ ಮಾಸ್ಟರ್‌ ಮೈಂಡ್‌ ದಾವೂದ್‌ ಇಬ್ರಾಹಿಂ ಗೆ ಅಕ್ರಮವಾಗಿ ಹಣ ವರ್ಗಾಯಿಸಿರುವ ಆರೋಪದ ಮೇಲೆ ಎನ್‌ಸಿಪಿ ಸಚಿವ ನವಾಬ್‌ ಮಲ್ಲಿಕ್‌ ರನ್ನು ತನಿಖಾಧಿರಿಗಳು ಬಂಧಿಸಿದ್ದರು. ಈ ಕುರಿತು ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್‌ ಗೆ ಮಲ್ಲಿಕ್‌ ಅರ್ಜಿ ಸಲ್ಲಿಸಿದ್ದರು. ಆದರೆ ಬಾಂಬೆ ಹೈಕೋರ್ಟ್‌ ಇದನ್ನು ನಿರಾಕರಿಸಿತ್ತು.

ನವಾಬ್‌ ಬಂಧನದ ಕುರಿತು ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ-ಎನ್‌ಸಿಪಿ ಮೈತ್ರಿ ಸರ್ಕಾರ ʼಇದು ರಾಜಕೀಯ ಷಡ್ಯಂತ್ರʼ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!