‘ದಿ ಕೇರಳ ಸ್ಟೋರಿ’ ತಡೆಗೆ ಸುಪ್ರೀಂ ನಕಾರ: ಒಳ್ಳೆಯ ನಿರ್ಧಾರ ಎಂದ ನಟ ಚೇತನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ದಿ ಕೇರಳ ಸ್ಟೋರಿ’ ಸಿನಿಮಾ ಮೇ 5 ರಂದು ತೆರೆಗೆ ಬರಲು ಸಿದ್ಧವಾಗಿದೆ ‘ಈ ನಡುವೆ ಕೇರಳದಲ್ಲಿ ಈ ಸಿನಿಮಾ ರಿಲೀಸ್‌ಗೆ ಭಾರಿ ವಿರೋಧ ವ್ಯಕ್ತವಾಗಿದೆ. ಸಿನಿಮಾಗೆ ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಅರ್ಜಿ ವಿಚಾರಣೆ ಮಾಡಲು ಕೋರ್ಟ್ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆಯನ್ನು ನಿರಾಕರಿಸಿದೆ. ವಕೀಲರಾದ ಕಪಿಲ್ ಸಿಬಲ್ ಹಾಗೂ ನಿಜಾಮ್ ಪಾಷಾಗೆ ಈ ಕುರಿತು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಪೀಠ ಸೂಚನೆ ನೀಡಿದೆ.

ಇತ್ತ ದಿ ಕೇರಳ ಸ್ಟೋರಿ’ ಸಿನಿಮಾವನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದು ಒಳ್ಳೆಯ ನಿರ್ಧಾರ. ರಾಜಕೀಯ ವಿಷಯವಿರುವ ಯಾವುದೇ ಚಲನಚಿತ್ರವನ್ನು ‘ಪ್ರಾಪಗಾಂಡ’ ಎಂದು ಪರಿಗಣಿಸಬಹುದು’ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.

‘ಸಿನಿಮಾ ಬಿಡುಗಡೆ ತಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ಮತ್ತು ಇತರರು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಿಚರ್ಡ್ ಅಟೆನ್‌ಬರೋ ಅವರ ಚಿತ್ರ ‘ಗಾಂಧಿ’ (1982) ಗೆ INC ಮತ್ತು ಇಂದಿರಾ ಗಾಂಧಿಯವರು ಹಣ ನೀಡಿದ್ದಾರೆ. ಆ ಚಲನಚಿತ್ರ ಪ್ರಾಪಗಾಂಡದ ಸಂಕೇತವಲ್ಲವೆ?’ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!