ಐತಿಹಾಸಿಕ ರಸ್ತೆಗಳು, ಸ್ಥಳಗಳ ಮರುನಾಮಕರಣದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಐತಿಹಾಸಿಕ ನಗರಗಳು ಮತ್ತು ಸ್ಥಳಗಳನ್ನು ಮರುನಾಮಕರಣ ಮಾಡಲು ಮರುನಾಮಕರಣ ಆಯೋಗವನ್ನು ರಚನೆ ಮಾಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

‘ಅನಾಗರಿಕ ವಿದೇಶಿ ಆಕ್ರಮಣಕಾರರ’ ಹೆಸರಿನ ‘ಪ್ರಾಚೀನ ಐತಿಹಾಸಿಕ ಸಾಂಸ್ಕೃತಿಕ ಧಾರ್ಮಿಕ ಸ್ಥಳಗಳ’ ಮೂಲ ಹೆಸರುಗಳನ್ನು ಕಂಡುಹಿಡಿಯಲು ‘ಮರುನಾಮಕರಣ ಆಯೋಗ’ ಬೇಕು ಎಂದು ಬಿಜೆಪಿ ನಾಯಕಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠವು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶವನ್ನು ಪ್ರಶ್ನಿಸಿ, “ದೇಶದಲ್ಲಿ ಉದ್ವಿಗ್ನವನ್ನುಂಟು ಮಾಡುವ” ಸಮಸ್ಯೆಗಳನ್ನು ಇದು ಮತ್ತೆ ಜೀವಂತಗೊಳಿಸುತ್ತದೆ ಎಂದು ಹೇಳಿದರು.

ಹಿಂದೂ ಧರ್ಮ ಒಂದು ಧರ್ಮವಲ್ಲ, ಅದು ಜೀವನ ವಿಧಾನ, ಹಿಂದೂ ಧರ್ಮದಲ್ಲಿ ಮತಾಂಧತೆ ಇಲ್ಲ. “ಭಾರತ ಜಾತ್ಯತೀತ ದೇಶ, ಇದು ಜಾತ್ಯತೀತ ವೇದಿಕೆ. ನಾವು ಸಂವಿಧಾನ ಮತ್ತು ಎಲ್ಲಾ ವಿಭಾಗಗಳನ್ನು ರಕ್ಷಿಸಬೇಕಾಗಿದೆ” ಮತ್ತು “ಅಸಮಾನತೆಯನ್ನು ಸೃಷ್ಟಿಸುವ ಹಿಂದಿನದನ್ನು ಕೆದಕಬೇಡಿ,. ದೇಶವನ್ನು ಉದ್ದ್ವಿಗ್ನಗೊಳಿಸಬೇಡಿ ಎಂದು ಸುಪ್ರೀಂ ಹೇಳಿದೆ.

ಅರ್ಜಿದಾರರು ತಮ್ಮ ಅರ್ಜಿಯಲ್ಲಿ, ವಿದೇಶಿ ಆಕ್ರಮಣಕಾರರಿಂದ “ಮರುನಾಮಕರಣಗೊಂಡ” ಪ್ರಾಚೀನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳ “ಮೂಲ” ಹೆಸರುಗಳನ್ನು ಮರುನಾಮಕರಣ ಮಾಡಲು ‘ಮರುನಾಮಕರಣ ಆಯೋಗ’ವನ್ನು ರಚಿಸುವಂತೆ ಕೇಂದ್ರಕ್ಕೆ ನಿರ್ದೇಶನವನ್ನು ಕೋರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!