ಸುಪ್ರೀಂಕೋರ್ಟ್ ಸಿಸೋಡಿಯಾಗೆ ಹಿನ್ನಡೆ: ಹೈಕೋರ್ಟ್​ನಲ್ಲಿ ಪ್ರಶ್ನಿಸುವಂತೆ ಸಿಜೆಐ ಸೂಚನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಹಿನ್ನಡೆಯಾಗಿದ್ದು, ಸಿಬಿಐ ಬಂಧನ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.ಮತ್ತು ಈ ಬಗ್ಗೆ ದೆಹಲಿ ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡುವಂತೆ ಸಿಜೆಐ ಪೀಠ ಸೂಚನೆ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ, ದೆಹಲಿಯಲ್ಲಿ ಘಟನೆ ಎಂದಾಕ್ಷಣ ಸುಪ್ರೀಂಕೋರ್ಟ್​ಗೆ ಬರುವಂತಿಲ್ಲ, ನೇರವಾಗಿ ಸುಪ್ರೀಂಕೋರ್ಟ್​ಗೆ ಬರುವ ಅಗತ್ಯವಿಲ್ಲ. ಮೊದಲು ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿ, ನಂತರ ಅಲ್ಲಿನ ತೀರ್ಪಿನ ಆಧಾರದ ಮೇಲೆ ಸುಪ್ರೀಂಗೆ ಅರ್ಜಿ ಸಲ್ಲಿಸಿ ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಸಿಸೋಡಿಯಾ ಅವರ ವಕೀಲ ಅಭಿಷೇಕ್ ಸಿಂಘ್ವಿ , ಸಿಬಿಐ ಆರೋಪಪಟ್ಟಿಯಲ್ಲಿ ಅವರ ಹೆಸರಿಲ್ಲದ ಕಾರಣ ಅವರ ಬಂಧನ ಕಾನೂನುಬಾಹಿರವಾಗಿದೆ ಮತ್ತು ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಸಿಬಿಐ ಆರೋಪವು ದುರ್ಬಲ ಎಂದು ಹೇಳಿದರು.

ಇದಕ್ಕೆ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಹೈಕೋರ್ಟ್‌ಗೆ ಹೋಗಿ, ನಮ್ಮಲ್ಲಿ ಈ ಬಗ್ಗೆ ಚರ್ಚೆ ನಡೆಸಬಹುದು ಆದರೆ ಈ ಹಂತದಲ್ಲಿ ಅದನ್ನು ಕೇಳಲು ನಾವು ಸಿದ್ಧರಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!