Wednesday, June 7, 2023

Latest Posts

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಇಂದು ಸುಪ್ರೀಂ ಮಹತ್ವದ ತೀರ್ಪು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉದ್ಧವ್‌ ಠಾಕ್ರೆ ಮತ್ತು ಏಕನಾಥ ಶಿಂಧೆ ನಡುವೆ ಒಂದು ವರ್ಷದಿಂದ ನಡೆಯುತ್ತಿರುವ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್‌ ಇಂದು ಅಂತ್ಯ ಹಾಡಲಿದ್ದು, ಮಹಾರಾಷ್ಟ್ರದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಲಿದೆ.

ಹಿಂದಿನ ವರ್ಷ ಶಿವಸೇನೆಯಿಂದ ಹೊರಬಂದು ಬಿಜೆಪಿ ಜೊತೆಗೆ ಮೈತ್ರಿ ಮಾಡಿರುವ ಹಾಲಿ ಸಿಎಂ ಏಕನಾಥ ಶಿಂಧೆ ನೇತೃತ್ವದ ಬಣದ ರಾಜಕೀಯ ಭವಿಷ್ಯವೂ ಕೂಡ ನಿರ್ಧಾರವಾಗಲಿದೆ. ಶಿವಸೇನೆ-ಕಾಂಗ್ರೆಸ್‌- ಎನ್‌ಸಿಪಿ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಂಡು ಬಿಜೆಪಿ ಜೊತೆಗೆ ಶಿಂಧೆ ಬಣದ ಶಿವಸೇನೆ ಸರ್ಕಾರ ರಚಿಸಿದೆ.

ಎಂವಿಎ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಎದುರಿಸುವ ಮುನ್ನ ರಾಜ್ಯಪಾಲರಾಗಿದ್ದ ಭಗತ್‌ ಸಿಂಗ್‌ ಕೋಶಿಯಾರಿ ಸರ್ಕಾರ ರಚನೆಗೆ ಆಹ್ವಾನಿಸಿದ್ದು, ಶಿಂಧೆ ಬಣದ ಶಾಸಕರಿಗೆ ಮಾನ್ಯತೆ ನೀಡುವ ವಿಚಾರದಲ್ಲಿ ಸ್ಪೀಕರ್‌ ಅನುಸರಿಸಿದ ಕ್ರಮ, ಪಕ್ಷದ ವಿಪ್‌ ಉಲ್ಲಂಘಿಸಿದ್ದು ಸೇರಿದಂತೆ ಹಲವು ಅಂಶಗಳ ವಿರುದ್ಧ ಕಾನೂನಾತ್ಮಕ ಹೋರಾಟ ಸುಪ್ರೀಂಕೋರ್ಟ್‌ನಲ್ಲಿ ನಡೆದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!