ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಜ್ವಲ್ ರೇವಣ್ಣ ಅವರು ಇನ್ನೊಂದು ತಿಂಗಳಲ್ಲಿ ಜೈಲಿನಿಂದ ಹೊರಗೆ ಬರ್ತಾರೆ, ಏನು ತಲೆ ಕೆಡೆಸಿಕೊಳ್ಳಬೇಡಿ. ನಾವು, ನೀವು ಎಲ್ಲರೂ ಒಟ್ಟಿಗೆ ಸ್ವಾಗತ ಮಾಡೋಣ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇವತ್ತಿಗೆ ಪ್ರಪಂಚ ಮುಗಿದು ಹೋಗಿಲ್ಲ. ಮುಂದಕ್ಕೂ ರಾಜಕೀಯ ಏನು, ಹೇಗೆ ಅನ್ನೋದು ನನಗೂ ಗೊತ್ತಿದೆ. ನಾಲ್ಕೈದು ತಿಂಗಳಲ್ಲಿ ಸರ್ಕಾರ ಬದಲಾವಣೆ ಆಗುತ್ತೆ. ಆನಂತರ ಅಲ್ಲಿದ್ದವರೆಲ್ಲರೂ ಹೆಚ್‌ಡಿ ರೇವಣ್ಣ ಜೈ ಅಂತಾರೆ ಎಂದು ಸೂರಜ್ ಹೇಳಿದರು.
ರೇವಣ್ಣ ಅವರು ಎಲ್ಲಾ ಹಳ್ಳಿಗಳಿಗೂ ರಸ್ತೆಗಳನ್ನು ಮಾಡಿದರು. ನಮ್ಮ ಗ್ರಾಮಕ್ಕೆ ಯಾರು ಹಿತ, ಯಾರು ಅಹಿತ ಅಂತ ಯೋಚನೆ ಮಾಡಬೇಕು. ಶಾಸ್ವತವಾಗಿ ನಿಮ್ಮ ಗ್ರಾಮದ ಕೆಲಸ ಮಾಡಿದವರನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರನ್ನು ಸೂರಜ್ ರೇವಣ್ಣ ಪ್ರಶ್ನೆ ಮಾಡಿದರು.