ಕೇಂದ್ರ ಸಚಿವರಾಗಿ ಸುರೇಶ್ ಗೋಪಿ ಪ್ರಮಾಣವಚನ ಸ್ವೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ದೇವರ ಸ್ವಂತ ನಾಡು’ ಕೇರಳದಲ್ಲಿ ಕಮಲ ಅರಳಿಸಿರೋ ಸಂಸದ ಸುರೇಶ್ ಗೋಪಿ (Suresh Gopi) ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಸೂಪರ್‌ಸ್ಟಾರ್ ಸುರೇಶ್ ಗೋಪಿ ಮೊದಲ ಬಾರಿ ಲೋಕಸದನ ಪ್ರವೇಶಿಸಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸುರೇಶ್ ಗೋಪಿ ತಮ್ಮ ಸಮೀಪದ ಸ್ಪರ್ಧಿ ಸಿಪಿಐನ ವಿಎಸ್ ಸುನಿಲ್ ಕುಮಾರ್ ಅವರನ್ನು 74 ಸಾವಿರ ಮತಗಳಿಂದ ಸೋಲಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದ ನಂತರ ಪ್ರತಿಕ್ರಿಯಿಸಿದ್ದ ಸುರೇಶ್ ಗೋಪಿ, ನನ್ನ ಕಠಿಣ ಪರಿಶ್ರಮ ಹಾಗೂ ಕೆಲಸಗಳಿಂದ ಜಯ ಸಿಕ್ಕಿದೆ. ತನ್ನ ಪರವಾಗಿ ನಿಂತ ಕ್ಯಾಥೋಲಿಕ್ ಸಮುದಾಯದ ಜನತೆಗೂ ಸುರೇಶ್ ಗೋಪಿ ಧನ್ಯವಾದಗಳನ್ನು ಸಲ್ಲಿಸಿದ್ದರು. ಸಂಸದನಾಗಿ ಕೆಲಸ ಮಾಡಲು ಅವಕಾಶ ನೀಡಿದ ತ್ರಿಶೂರ್ ಜನತೆಗೆ ಧನ್ಯವಾದ ಸಲ್ಲಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!