ಹೊಸದಿಗಂತ ಡಿಜಿಟಲ್ ಡೆಸ್ಕ್:
ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೋದಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಎನ್‌ಡಿಎ ಮೈತ್ರಿಕೂಟದ 30 ಸಂಸದರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲಾಗಿದೆ. ಐವರಿಗೆ ಸ್ವತಂತ್ರ ನಿರ್ವಹಣೆ ಮತ್ತು 36 ಸಂಸದರನ್ನು ರಾಜ್ಯ ಸಹಾಯಕ ಸಚಿವರನ್ನಾಗಿ ನೇಮಿಸಲಾಗಿದೆ.
ಬಳಿಕ, ಕೇಂದ್ರ ಸಚಿವರಾಗಿ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ,ಜೆ.ಪಿ. ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್ , ಎಸ್. ಜೈಶಂಕರ್, ಮನೋಹರ್ ಲಾಲ್ ಕಟ್ಟರ್, ಎಚ್. ಡಿ. ಕುಮಾರಸ್ವಾಮಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಜಿತಿನ್ ರಾಮ್ ಮಾಂಜಿ , ರಾಜೀವ್ ರಂಜನ್ ಸಿಂಗ್ , ಸೋನಾವಲ್ , ವೀರೇಂದ್ರ ಕುಮಾರ್, ರಾಮ್ ಮೋಹನ್ ನಾಯ್ಡು ,ಪ್ರಲ್ಹಾದ್ ಜೋಶಿ,ಜುವೆಲ್ ಓರಮ್ ,ಗಿರಿರಾಜ್ ಸಿಂಗ್, ಅಶ್ವಿನ್ ವೈಷ್ಣವ್, ಜ್ಯೋತಿರಾದಿತ್ಯ ಸಿಂಧಿಯಾ, ಭೂಪೇಂದ್ರ ಯಾದವ್ , ಗಜೇಂದ್ರ ಸಿಂಗ್ ಶೇಖಾವತ್ ,ಅನ್ನಪೂರ್ಣ ದೇವಿ , ಕಿರಣ್ ರಿಜಿಜು, ಹರ್ ದೀಪ್ ಸಿಂಗ್ ಪುರಿ, ಡಾ.ಮಾನ್ಸುಖ್ ಮಾಂಡವೀಯ, ಕಿಶನ್ ರೆಡ್ಡಿ, ಚಿರಾಗ್ ಪಾಸ್ವಾನ್, ಸಿ.ಆರ್. ಪಾಟೀಲ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಸ್ವತಂತ್ರ ಸಚಿವರಾಗಿ ಇಂದ್ರಜಿತ್ ಸಿಂಗ್ , ಡಾ. ಜಿತೇಂದ್ರ ಸಿಂಗ್ , ಅರ್ಜುನ್ ಮೇಘವಾಲ್ , ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್, ಜಯಂತ್ ಚೌಧರಿ ಅವರು ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯ ಖಾತೆ ಸಚಿವರಾಗಿ ಜಿತಿನ್ ಪ್ರಸಾದ್, ಶ್ರೀಪಾದ್ ಯಶೋ ನಾಯಕ್, ಪಂಕಜ್ ಚೌಧರಿ, ಕೃಷ್ಣ ಪಾಲ್ , ರಾಮದಾಸ್ ಅಠವಾಳೆ, ರಾಮ್ ದಾಸ್ ಠಾಕೂರ್, ನಿತ್ಯಾನಂದ ರಾಯ್ , ಅನುಪ್ರಿಯ ಪಟೇಲ್, ಸೋಮಣ್ಣ, ಪೆಮ್ಮಸಾನಿ ಚಂದ್ರಶೇಖರ್, ಎಸ್. ಪಿ. ಸಿಂಗ್ ಬಘೇಲ್ , ಶೋಭಾ ಕರಾಂದ್ಲಜೆ , ಕೀರ್ತಿವರ್ಧನ್ ಸಿಂಗ್, ಬಿ.ಎಲ್. ವರ್ಮಾ, ಶಾಂತನು ಠಾಕೂರ್, ಸುರೇಶ್ ಗೋಪಿ,ಎಲ್. ಮುರುಗನ್, ಅಜಯ್ ತಮಟಾ , ಬಂಡಿ ಸಂಜಯ್ ಕುಮಾರ್, ಕಮಲೇಶ್ ಪಾಸ್ವಾನ್, ಭಗೀರಥ ಚೌಧರಿ, ಸತೀಶ್ ಚಂದ್ರ ದುಬೆ, ಸಂಜಯ್ ಸೇಠ್ , ರವನೀತ್ ಸಿಂಗ್ , ದುರ್ಗಾದಾಸ್ , ರಕ್ಷಾ ನಿಖಿಲ್, ಸುಕಾಂತ ಮಜುಂದಾರ್, ಸಾವಿತ್ರಿ ಠಾಕೂರ್, ತೋಕನ್ ಸಾಹು, ರಾಜು ಭೂಷಣ್ ಚೌಧರಿ, ಶ್ರೀನಿವಾಸ್ ವರ್ಮಾ, ಹರ್ಷ ಮಲ್ಹೋತ್ರಾ , ನಿಮುಬೆನ್ ಬಾಂಭಣಿಯಾ, ಮುರಳೀಧರ್ ಮೊಹೊಲ್, ಜಾರ್ಜ್ ಕುರಿಯನ್ , ಪವಿತ್ರ ಮಾರ್ಗರಿಟಾ ಅವರು ಪ್ರಮಾಣವಚನ ಸ್ವೀಕರಿಸಿದರು.