`ಸರ್ಫಿರಾ’ ಚಿತ್ರದ ಟ್ರೈಲರ್ ಬಿಡುಗಡೆ: ಕ್ಯಾ. ಜಿ.ಆರ್​. ಗೋಪಿನಾಥ್ ಗೆ ಥ್ಯಾಂಕ್ಸ್ ಎಂದ ನಟ ಅಕ್ಷಯ್ ಕುಮಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ `ಸರ್ಫಿರಾ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಈ ಸಿನಿಮಾ ಕನ್ನಡಿಗ ಕ್ಯಾಪ್ಟನ್​ ಜಿ.ಆರ್​. ಗೋಪಿನಾಥ್​ ಅವರ ಸಾಹಸಗಾಥೆಯ ಸಿನಿಮಾ ಆಗಿದ್ದು, ತಮಿಳಿನಲ್ಲಿ ‘ಸೂರರೈ ಪೋಟ್ರು’ ಸಿನಿಮಾ ಮಾಡಲಾಗಿತ್ತು. ಒಟಿಟಿಯಲ್ಲಿ ತೆರೆಕಂಡ ಆ ಸಿನಿಮಾದಲ್ಲಿ ಸೂರ್ಯ ಮುಖ್ಯ ಪಾತ್ರ ಮಾಡಿದ್ದರು. ಇದೀಗ ಆ ಸಿನಿಮಾ ‘ಸರ್ಫಿರಾ’ ಶೀರ್ಷಿಕೆಯಲ್ಲಿಹಿಂದಿಗೆ ರಿಮೇಕ್​ ಆಗಿದೆ. ಇದರಲ್ಲಿ ಕ್ಯಾಪ್ಟನ್​ ಜಿ.ಆರ್​. ಗೋಪಿನಾಥ್​ ಅವರ ಪಾತ್ರಕ್ಕೆ ಅಕ್ಷಯ್​ ಕುಮಾರ್​ ಬಣ್ಣ ಹಚ್ಚಿದ್ದಾರೆ.

ಸುಧಾ ಕೊಂಗರ ತಮಿಳಿನಲ್ಲಿ ನಿರ್ದೇಶನ ಮಾಡಿದ್ದರು. ಈ ಸಿನಿಮಾಗೆ ಸುಧಾ ಕೊಂಗರ ಅವರೇ ನಿರ್ದೇಶನ ಮಾಡಿದ್ದಾರೆ. ಸೂರರೈ ಪೋಟ್ರುʼ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಆಸ್ಕರ್ ರೇಸ್‌ಗೂ ಇಳಿದಿದ್ದ ಈ ಚಿತ್ರ ಹಲವು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿತ್ತು. ಸೂರ್ಯ ಅತ್ಯುತ್ತಮ ನಟ, ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅಲ್ಲದೆ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕೆ ಜಿ.ವಿ.ಪ್ರಕಾಶ್‌ ಕುಮಾರ್‌ಗೆ ನ್ಯಾಶನಲ್‌ ಅವಾರ್ಡ್‌ ಬಂದಿತ್ತು. ಅತ್ಯುತ್ತಮ ಚಿತ್ರವಾಗಿಯೂ ಆಯ್ಕೆಯಾಗಿತ್ತು. ಇದೀಗ ಅಕ್ಷಯ್‌ ಕುಮಾರ್‌ ಅಭಿನಯದ ‘ಸರ್ಫಿರಾ’ ಸಿನಿಮಾ ಜುಲೈ 12ರಂದು ಬಿಡುಗಡೆ ಆಗಲಿದೆ.

ಟ್ರೈಲರ್‌ ಬಿಡುಗಡೆಯಾದ ಕುರಿತು ಕ್ಯಾಪ್ಟನ್​ ಗೋಪಿನಾಥ್, 1 ರೂಪಾಯಿಗೆ ವಿಮಾನದ ಟಿಕೆಟ್​ ನೀಡಿ ನಾವು ಏರ್​ ಡೆಕ್ಕನ್​ ಲಾಂಚ್​ ಮಾಡಿದಾಗ ವೆಬ್​ಸೈಟ್​ ಕ್ರ್ಯಾಶ್​ ಆಗಿತ್ತು. ಈಗ ಟ್ರೇಲರ್​ಗೆ ಸಿಕ್ಕ ಜನಸ್ಪಂದನೆ ನೋಡಿ ನನಗೆ ಅದೆಲ್ಲ ನೆನಪಾಯಿತು. ನಾನು ಹುಚ್ಚ ಎಂದು ಜನರು ಭಾವಿಸಿದ್ದರು. ಹೌದು, ನಾನು ಹುಚ್ಚನಾಗಿದ್ದೆ’ ಎಂದು ಎಕ್ಸ್​’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಅಕ್ಷಯ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ‘ಖಂಡಿತ ಸರ್ ಕೆಲವೊಮ್ಮೆ ಅಸಾಧಾರಣವಾದದ್ದು ಮಾಡಬೇಕಾದರೆ ಸ್ವಲ್ಪ ಹುಚ್ಚತನ ಅತ್ಯವಶ್ಯಕ. ಇಂತಹ ಸ್ಪೂರ್ತಿದಾಯಕ ಕಥೆಯನ್ನು ನಮಗೆ ನೀಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

https://x.com/akshaykumar/status/1803339581166592130?ref_src=twsrc%5Etfw%7Ctwcamp%5Etweetembed%7Ctwterm%5E1803339581166592130%7Ctwgr%5Ec938222e20bb314141e0637b4039f3e0a050b557%7Ctwcon%5Es1_&ref_url=https%3A%2F%2Fvistaranews.com%2Fcinema-film%2Fbollywood%2Fsarfira-trailer-akshay-kumar-sudha-kongara%2F676579.html

ಅಕ್ಷಯ್ ಕುಮಾರ್ ಜತೆಗೆ, ಸರ್ಫಿರಾ ಪರೇಶ್ ರಾವಲ್, ರಾಧಿಕಾ ಮದನ್ ಮತ್ತು ಸೀಮಾ ಬಿಸ್ವಾಸ್ ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಅರುಣಾ ಭಾಟಿಯಾ (ಕೇಪ್ ಆಫ್ ಗುಡ್ ಫಿಲ್ಮ್ಸ್), ಸೂರ್ಯ ಮತ್ತು ಜ್ಯೋತಿಕಾ (2ಡಿ ಎಂಟರ್‌ಟೈನ್‌ಮೆಂಟ್) ವಿಕ್ರಮ್ ಮಲ್ಹೋತ್ರಾ (ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್) ಸಹ-ನಿರ್ಮಾಣ ಮಾಡಿದ್ದಾರೆ. ಸಂಗೀತ ಜಿ.ವಿ.ಪ್ರಕಾಶ್ ಕುಮಾರ್ ಇದೆ. ಚಿತ್ರವನ್ನು ಸುಧಾ ಕೊಂಗರ ನಿರ್ದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!