ʼವಿಕ್ರಮʼ ಚಿತ್ರದಲ್ಲಿ ಕಮಲ್-ಫಸಿಲ್‌-‌ ವಿಜಯ್‌ ಜೊತೆ ‌ಕಾಣಿಸಿಕೊಳ್ಳಲಿದ್ದಾರೆ ಮತ್ತೊಬ್ಬ ಸೂಪರ್‌ ಸ್ಟಾರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಲೋಕೇಶ್ ಕನಕರಾಜ್‌ ನಿರ್ದೇಶನದ ಪ್ಯಾನ್‌ ಇಂಡಿಯಾಚಿತ್ರ ‌ ʼವಿಕ್ರಮ್ʼ ‌ತನ್ನ ಭರ್ಜರಿ ತಾರಂಗಣದ ಕಾರಣದಿಂದ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಹುಟ್ಟುಹಾಕಿದೆ. ಕಾಲಿವುಡ್‌ ದಿಗ್ಗಜ ನಟರಾದ ಕಮಲ್‌ ಹಸನ್‌, ವಿಜಯ್‌ ಸೇತುಪತಿ ಹಾಗೂ ಖ್ಯಾತ ಮಲೆಯಾಳಂ ನಟ ಫಹದ್‌ ಫಸಿಲ್‌ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರವು ಜೂನ್‌ 3 ರಂದು ತೆರೆಗಪ್ಪಳಿಸಲಿದೆ. ಈ ನಡುವೆ ಚಿತ್ರತಂಡವು ಅಭಿಮಾನಿಗಳಿಗೆ ರೋಮಾಂಚಿತಗೊಳಿಸುವಂತಹ ಅಪ್ದೇಟ್‌ ಒಂದನ್ನು ನೀಡಿದ್ದು, ಕಾಲಿವುಡ್‌ ಸೂಪರ್‌ ಸ್ಟಾರ್‌ ಸೂರ್ಯ ಸಹ ಚಿತ್ರದಲ್ಲಿ ಕಾಣಿಸಿಕೊಳ್ಳುವ ವಿಚಾರ ರಿವಿಲ್‌ ಮಾಡಿದೆ.
ನಿರ್ದೇಶಕ ಲೋಕೇಶ್ ಕನಕರಾಜ್ ಬುಧವಾರ ಪೋಸ್ಟರ್‌ ಒಂದನ್ನು ಹಂಚಿಕೊಳ್ಳುವು ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಈ ಪೋಸ್ಟರ್‌ ನಲ್ಲಿ ಸೂರ್ಯ ಚಿತ್ರದಲ್ಲಿ ಪಾತ್ರನಿರ್ವಹಿಸಿರುವ ವಿಚಾರ ಬಹಿರಂಗಪಡಿಸಿದ್ದಾರೆ. ʼಚಿತ್ರದಲ್ಲಿ ನಟಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್‌ʼ ಎಂದು ಲೋಕೇಶ್‌ ಅಡಿಟಿಪ್ಪಣಿ ಬರೆದಿದ್ದಾರೆ. ಹೊಸ ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡಿರುವ ಸೂರ್ಯ ಚಿತ್ರವನ್ನು ಮರೆಮಾಡಲಾಗಿದ್ದು, ಸೂರ್ಯ ಪಾತ್ರದ ಬಗ್ಗೆ ಸಸ್ಪೆನ್ಸ್‌ ಕಾಪಾಡಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ಸೂರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸೂರ್ಯ ಅವರ ಪಾತ್ರವನ್ನು ರಹಸ್ಯವಾಗಿಡಲು ಚಿತ್ರತಂಡ ನಿರ್ಧರಿಸಿತ್ತು. ಇದಕ್ಕಾಗಿಯೇ ಟ್ರೈಲರ್‌ ನಲ್ಲಿಯೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಟ್ರೇಲರ್‌ ನಲ್ಲಿ ಸೂರ್ಯ ಮುಖ ನೇರವಾಗಿ ಕಾಣದಿದ್ದರೂ ಹದ್ದಿನ ಕಣ್ಣಿನ ಅಭಿಮಾನಿಗಳು ಟ್ರೇಲರ್‌ನಲ್ಲಿ ಸೂರ್ಯರನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದರು. ಸೂರ್ಯ ಉಪಸ್ಥಿತಿಯು ಮೊದಲೇ ಸ್ಟಾರ್‌ ಗಳಿಂದ ತುಂಬಿರುವ ಚಿತ್ರದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕಮಲ್ ಹಾಸನ್ ಸಹ, ಸೂರ್ಯ ಜೊತೆ ಸಿನಿಮಾ ಮಾಡಲು ಎದುರು ನೋಡುತ್ತಿದ್ದೆ. ಅವರೊಂದಿಗೆ ನಟಿಸಿರುವುದಕ್ಕೆ ಥ್ರಿಲ್‌ ಆಗಿದ್ದೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!