Sunday, August 14, 2022

Latest Posts

ಅಭಿಮಾನಿಗಳಿಗೆ ಸಪ್ರೈಸ್‌ ನೀಡಿದ ಆಲಿಯಾ ರಣಬೀರ್‌ ಜೋಡಿ : ಮಮ್ಮಿಯಾಗ್ತಿದಾಳೆ ʼಗಂಗೂಬಾಯಿʼಯ ನಾಯಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚಿಗಷ್ಟೇ ಮದುವೆಯಾಗಿದ್ದ ಬಾಲಿವುಡ್‌ ಹೊಸಜೋಡಿ ಇದೀಗ ಅಭಿಮಾನಿಗಳಿಗೆ ಸಪ್ರೈಸ್‌ ನೀಡಿದ್ದಾರೆ. ತಾವು ತಾಯಿಯಾಗುತ್ತಿರುವ ಕುರಿತು ಇದೀಗ ಆಲಿಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತನ್ನ ಪತಿ ರಣಬೀರ್‌ ಕಪೂರ್‌ ಜೊತೆಯಲ್ಲಿ ಸೋನೋಗ್ರಫಿಗೆ ಒಳಗಾಗುತ್ತಿರುವ ಫೊಟೋವೊಂದನ್ನು ಆಲೀಯಾ ಪೋಸ್ಟ್‌ ಮಾಡಿದ್ದಾರೆ. ʼಶೀಘ್ರದಲ್ಲೇ ನಮ್ಮ ಮಗು ಜನಿಸಲಿದೆ…..ʼ ಎಂದು ಅಡಿ ಬರಹದೊಂದಿಗೆ ಆಲಿಯಾ ಶೇರ್‌ ಮಾಡಿ ತಮ್ಮ ಫ್ಯಾನ್ಸ್‌ ಗೆ ಸಪ್ರೈಸ್‌ ನೀಡಿದ್ದಾರೆ. ಪೋಟೋದಲ್ಲಿರುವ ರಣಬೀರ್‌ ಕಪೂರ್‌ ಕೂಡ ತಾವು ತಂದೆಯಾಗುತ್ತಿರುವ ಕುರಿತು ಎಕ್ಸೈಟ್‌ ಆಗಿದ್ದಾರೆ. ಇದೇ ಬರುವ ನವೆಂಬರ್‌ ತಿಂಗಳಲ್ಲಿ ಮಗುವಿನ ಜನನವಾಗಬಹುದು ಎನ್ನಲಾಗುತ್ತಿದೆ. ಇದೇ ಏಪ್ರಿಲ್‌ 14 ರಂದು ರಣಬೀರ್‌ ಆಲಿಯಾ ವಿವಾಹವಾಗಿದ್ದರು. ಮದುವೆಯಾದ ಮೂರೇ ತಿಂಗಳಿಗೆ ಶುಭಸುದ್ದಿಯನ್ನು ನೀಡಿರುವದಕ್ಕೆ ಅಭಿಮಾನಿಗಳು ದಿಲ್‌ ಖುಷ್‌ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss