ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾದ ಬಳಿಕ ಮನೆಗೆ ಮೊದಲ ಬಾರಿಗೆ ಬರುವ ಅಳಿಯನಿಗೆ ಅತ್ತೆ-ಮಾವಂದಿರು ಸಾಮಾನ್ಯವಾಗಿ ವಿಶೇಷ ಗೌರವ ನೀಡುತ್ತಾರೆ. ಆದರೆ, ಆಂಧ್ರಪ್ರದೇಶದಲ್ಲಿ ಬಹಳ ಹಿಂದಿನಿಂದ ಒಂದು ವಿಶೇಷ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಅದೇನೆಂದರೆ, ಮದುವೆಯಾಗಿ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಉಣಬಡಿಸುವುದು.
ಆಂಧ್ರದ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ಮನೆಗೆ ಬಂದ ಹೊಸ ಅಳಿಯನಿಗೆ ಅತ್ತೆ 100 ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಾಕಿನಾಡ ಜಿಲ್ಲೆಯ ಕಿರ್ಲಂಪುಡಿ ಮಂಡಲದ ತಾಮರದ ಗ್ರಾಮದ ರತ್ನಕುಮಾರಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಕಿನಾಡ ನಗರದ ರವಿತೇಜ ಅವರನ್ನು ವಿವಾಹವಾಗಿದ್ದರು. ಆದರೆ, ಮದುವೆಯ ನಂತರ ಆಷಾಢ ಮಾಸ ಮುಗಿದು ಅಳಿಯ ಮೊದಲ ಬಾರಿಗೆ ಅತ್ತೆಯ ಮನೆಗೆ ಬಂದಾಗ ಅತ್ತೆಯು ತನ್ನ ಅಳಿಯನಿಗೆ ಭರ್ಜರಿ ಊಟವನ್ನು ಸಿದ್ಧಪಡಿಸಿದರು.
ಬರೋಬ್ಬರಿ ನೂರು ಬಗೆಯ ತಿನಿಸುಗಳನ್ನು ಅಳಿಯನ ಮುಂದೆ ಉಣಬಡಿಸಲಾಗಿತ್ತು. ತನ್ನ ಮುಂದೆ ವಿವಿಧ ಖಾದ್ಯಗಳನ್ನು ನೋಡಿದ ಅಳಿಯ ಯಾವುದನ್ನು ತಿನ್ನುವುದು ಮತ್ತು ಯಾವುದನ್ನು ಬಿಡುವುದು ಎಂಬ ಗೊಂದಲಕ್ಕೆ ಒಳಗಾದರು. ಅಲ್ಲದೆ, ತನ್ನ ಅತ್ತೆ ತನಗಾಗಿ ವಿವಿಧ ಬಗೆಯ ಅಡುವೆ ಮಾಡಿದಕ್ಕೆ ಹರ್ಷ ವ್ಯಕ್ತಪಡಿಸಿದರು. ವಿಡಿಯೋ ವೈರಲ್ ಆಗಿದೆ
, ಯಲ್ಲಾಬೇಕರಿ ಸ್ವೀಟ್ಸ್ ಇದಾವ ಅತ್ತೆವ್ವಾ 🤣. ಯಾವ ಬೇಕರಿ
ಇದು ನಿಜವಾದರೆ ಬ್ರದರ್ ನಿನ್ನ ಹೆಂಡತಿಯನ್ನ ಚೆನ್ನಾಗಿ ನೋಡಿಕೋ. ನಿಮ್ಮ ಅತ್ತೆ ತಮ್ಮ ಮಗಳಿಗೂ ಉತ್ತಮ ಅತಿಥಿ ಸತ್ಕಾರ ದ ವಿಷ್ಯ ತನ್ನ ಗoಡನನ್ನ ಹೇಗೆ ನೋಡಿಕೊಳ್ಳಬೇಕು ಎಂಬಂದನ್ನ ಚೆನ್ನಾಗಿ ಕಲಿಸಿರುತ್ತಾರೆ.