ಹೊಸದಿಗಂತ ವರದಿ,ಕಾರವಾರ:
ಅಂಕೋಲಾದ ಶಾಲೆಯೊಂದರ ಮೇಲ್ಛಾವಣಿಯ ಪ್ಲಾಸ್ಟರ್ ಕುಸಿದು ವಿದ್ಯಾರ್ಥಿಗಳು ಗಾಯಗೊಂಡಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕಿ ರೂಪಾಲಿ ಎಸ್. ನಾಯ್ಕ ಸೂಚಿಸಿದ್ದಾರೆ.
ಶಾಲಾ ಕಟ್ಟಡದ ಮೇಲ್ಫಾವಣಿಯ ಪ್ಲಾಸ್ಟರ್ ಕುಸಿದು ಮಕ್ಕಳು ಗಾಯಗೊಂಡಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹ ಘಟನೆ ಯಾವುದೆ ಕಾರಣಕ್ಕೂ ಮರುಕಳಿಸಬಾರದು. ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಶಾಲೆಯ ಮೇಲ್ಛಾವಣಿ ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ತಿಳಿಸಿದ್ದಾರೆ.
ಶಾಲೆಗಳ ಸುರಕ್ಷತೆ ಸಮೀಕ್ಷೆ:
ಶಾಲೆಗಳ ಕಟ್ಟಡದ ಸ್ಥಿತಿಗತಿ ಹೇಗಿದೆ. ಮಕ್ಕಳು ಸುರಕ್ಷಿತವಾಗಿ ಕಲಿಕೆ ಮುಂದುವರಿಸಬಹುದೆ ಎಂಬ ಬಗ್ಗೆ ಪ್ರತಿಯೊಂದು ಶಾಲೆಗೂ ಭೇಟಿ ನೀಡಿ ಸಮೀಕ್ಷೆ ನಡೆಸುವಂತೆ ಅಂಕೋಲಾ ತಹಶೀಲ್ದಾರ ಹಾಗೂ ಬಿಇಓ ಅವರಿಗೆ ಶಾಸಕರಾದ ಶ್ರೀಮತಿ ರೂಪಾಲಿ ಎಸ್.ನಾಯ್ಕ ನಿರ್ದೇಶನ ನೀಡಿದ್ದಾರೆ.