ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯಗಳ ಮುಂಚೆಯೇ ಭಾರತ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಕೈಗೆ ಗಂಭೀರ ಗಾಯವಾಗಿದೆ.
ಸೂರ್ಯಕುಮಾರ್ ಯಾದವ್ ಅವರು ಬುಚ್ಚಿ ಬಾಬು ಪಂದ್ಯಾವಳಿಯಲ್ಲಿ ಮುಂಬೈ ತಂಡದ ಪರವಾಗಿ ಆಟವಾಡುತ್ತಿದ್ದಾರೆ. ತಮಿಳನಾಡು ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಅವರ ಕೈಗೆ ಗಂಭೀರ ಗಾಯವಾಗಿದೆ.
ಸೆ.5 ರಿಂದ ನಡೆಯಲಿರುವ ದುಲೀಪ್ ಟ್ರೋಫಿಯಲ್ಲೂ ಸೂರ್ಯಕುಮಾರ್ ಅವರ ಹೆಸರಿದೆ. ಸೂರ್ಯಕುಮಾರ್ ಅವರ ಕೈ ಗಾಯ ಯಾವ ಪ್ರಮಾಣದ್ದು ಎನ್ನುವುದು ತಿಳಿದು ಬಂದಿಲ್ಲ