ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಿದ ಸೂರ್ಯರಶ್ಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕರ ಸಂಕ್ರಾಂತಿಯ ದಿನವಾದ ಇಂದು ಸೂರ್ಯನು ದಕ್ಷಿಣಾಯನದಿಂದ ಪಥ ಬದಲಿಸಿ ಉತ್ತರಾಯಣ ಚಲನೆಗೆ ತೊಡಗುವ ದಿನ. ಈ ವೇಳೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸುವ ಪ್ರಕೃತಿಯ ಐತಿಹಾಸಿಕ ಕೌತುಕ ನಡೆಯಿತು.
ಆರಂಭದಲ್ಲಿ ನಂದಿವಾಹನವನ್ನು ಸ್ಪರ್ಶಿಸಿದ ಸೂರ್ಯರಶ್ಮಿಯು ಕೆಲ ಕ್ಷಣಗಳಲ್ಲೇ ಶಿವಲಿಂಗವನ್ನು ಸ್ಪರ್ಶಿಸಿತು. ಈ ಕೌತುಕ ಸಂಜೆ 5.13ರಿಂದ ಪ್ರಾರಂಭವಾಗಿ 2 ನಿಮಿಷ 13 ಸೆಕೆಂಡುಗಳ ಕಾಲ ನಡೆಯಿತು.
ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಶಿವಲಿಂಗಕ್ಕೆ ವಿಶೇಷ ಬಗೆಬಗೆಯ ಅಭಿಷೇಕಗಳು ನಡೆದವು. ಸೂರ್ಯನ ಕಿರಣಗಳ ಅದ್ಭುತ ಅಭಿಷೇಕದ ಜೊತೆಗೆ ಗಂಗಾಧರೇಶ್ವರನಿಗೆ ಹಾಲು, ಎಳನೀರು, ಪವಿತ್ರ ಜಲದಿಂದ ಅಭಿಷೇಕ ಮಾಡಲಾಯಿತು.
ಕಳೆದ ವರ್ಷ ಮೋಡದಿಂದಾಗಿ ಈ ವಿಸ್ಮಯ ನಡೆದಿರಲಿಲ್ಲ. ಕೋವಿಡ್​ ಹಿನ್ನೆಲೆಯಲ್ಲಿ ಈ ಬಾರಿ ಸೂರ್ಯರಶ್ಮಿ ಸ್ಪರ್ಶ ಕಾಲದಲ್ಲಿ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶ ನೀಡಿರಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!