ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಿಯಾ ಚಕ್ರವರ್ತಿ ಸಿನಿಮಾಗಳಿಗಿಂತ ಹೆಚ್ಚು ಹೆಸರು ಮಾಡಿದ್ದು, ಸುಶಾಂತ್ ಸಿಂಗ್ ರಜಪೂತ್ ಗರ್ಲ್ಫ್ರೆಂಡ್ ಆಗಿದ್ದಾಗ.
ಅದರಲ್ಲಿಯೂ ಸುಶಾಂತ್ ನಿಧನದ ನಂತರ ಸುಶಾಂತ್ ಮರ್ಡರ್ ಆರೋಪವನ್ನು ರಿಯಾ ಎದುರಿಸಿದ್ದರು. ಸುಶಾಂತ್ಗೆ ಡ್ರಗ್ಸ್ ನೀಡಿ ಕೊಲೆ ಮಾಡಿ ಸೂಸೈಡ್ ಎಂದು ಬಿಂಬಿಸಲಾಗಿದೆ ಎನ್ನಲಾಗಿತ್ತು. ಇನ್ನು ರಿಯಾ ಪ್ರೀತಿಸಿ ಕೈಕೊಟ್ಟು ಹೋಗಿದ್ದರಿಂದ ದುಃಖದಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾತೂ ಕೇಳಿಬಂದಿತ್ತು.
ಈ ಬಗ್ಗೆ ರಿಯಾ ಮತ್ತೆ ಮಾತನಾಡಿದ್ದು, ಸುಶಾಂತ್ ಸಾವಿಗೆ ನಾನೇ ಕಾರಣ ಎಂದು ಎಲ್ಲರೂ ನನ್ನನ್ನು ದೂರಿದರು, ಗೋಲ್ಡ್ ಡಿಗ್ಗರ್ ಎಂದರು, ಸಾಕಷ್ಟು ಆರೋಪ ಮಾಡಿದರು. ಆದರೆ ನನ್ನ ಹಾಗೂ ಸುಶಾಂತ್ ಮಧ್ಯೆ ಇದ್ದ ಬಾಂಧವ್ಯ ನನಗೆ ಅವರಿಗೆ ಮಾತ್ರ ಗೊತ್ತು. ಈಗಲೂ ಸುಶಾಂತ್ ನನ್ನ ಜೊತೆಯೇ ಇದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.