ಪತ್ನಿ ಜೊತೆಗೆ ಅನೈತಿಕ ಸಂಬoಧ ಶಂಕೆ: ವ್ಯಕ್ತಿಯನ್ನು ಕೊಲೆಗೈದ ಪತಿ

ಹೊಸದಿಗಂತ ವರದಿ,ಮಸ್ಕಿ (ರಾಯಚೂರು) :

ಪತ್ನಿಗೆ ಮೆಸೇಜ್ ಮಾಡುತ್ತಿದ್ದುದರಿಂದ ಅವಳೊಂದಿಗೆ ಅನೈತಿಕ ಸಂಬoಧ ಹೊಂದಿರಬಹುದೆoಬ ಶಂಕೆಯಿoದ ವ್ಯಕ್ತಿಯನ್ನು ಮಹಿಳೆಯ ಪತಿ ಕೊಲೆಗೈದ ಘಟನೆ ಮಸ್ಕಿ ತಾಲ್ಲೂಕಿನ ಬಳಗನೂರು ಪಟ್ಟಣದಲ್ಲಿ ನಡೆದಿದೆ.

ತನ್ನ ಪತ್ನಿಗೆ ಮೆಸೇಜ್ ಮಾಡುತ್ತಿದ್ದುದನ್ನು ಗಮನಿಸಿದ್ದ ಮಹಿಳೆಯ ಪತಿ ಮಾರುತಿ ಎಂಬಾತ ಚಾಲಕನಾಗಿದ್ದ ಖಾದರ್ ಬಾಬಾಸಾಬ್ (೩೨) ಎನ್ನುವ ವ್ಯಕ್ತಿಗೆ ಮೆಸೇಜ್ ಮಾಡದಂತೆ ಅನೇಕ ಬಾರಿ ಹೇಳಿದ್ದಾನೆ ಆದರೆ ಅವನ ಮಾತನ್ನು ಕೇಳದೇ ಮತ್ತೆ ಮತ್ತೆ ಮೆಸೇಜ್ ಮಾಡುತ್ತಿದ್ದುದರಿಂದ ಸಿಟ್ಟಿಗೆದ್ದು ಅವನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

ಆರೋಪಿ ಆಂಜನೇಯ ದೇವಸ್ಥಾನದ ಅರ್ಚಕನಾಗಿರುವ ಮಾರುತಿ ಕೊಲೆ ಮಾಡಿದ ನಂತರ ತಾನೇ ಖುದ್ದಾಗಿ ಪೊಲೀಸ್ ಠಾಣೆಗೆ ಬಂದು ನಾನು ಕೊಲೆ ಮಾಡಿರುವದಾಗಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ.

ಈ ಹತ್ಯೆಯಲ್ಲಿ ಇನ್ನು ಕೆಲವರು ಭಾಗಿ ಆಗಿರುವ ಶಂಕೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ.ಬಿ ಸಂಶಯವನ್ನು ವ್ಯಕ್ತಪಡಿಸಿದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಸದ್ಯ ಆರೋಪಿ ಮಾರುತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!