ಹೊಸ ದಿಗಂತ ವರದಿ, ಶಿರಸಿ:
ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಅನುಮಾನಸ್ಪದವಾಗಿ ಸಾವು ಕಂಡ ಘಟನೆ ತಾಲೂಕಿನ ಕೋಣನ ಬಿಡ್ಕಿಯಲ್ಲಿ ನಡೆದಿದೆ.
ತಾಲೂಕಿನ ಕೋಣನಬಿಡ್ಕಿ ಅರಣ್ಯ ಪ್ರದೇಶದಲ್ಲಿ 4 ವರ್ಷದ ಹೆಣ್ಣು ಚಿರತೆ ಸಾವು ಕಂಡಿದ್ದು, ಚಿರತೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೂಡಲೇ ವಿಷಯ ತಿಳಿದ ಅರಣ್ಯ ಇಲಾಖೆ ಭೇಟಿ ನೀಡಿದ್ದು, ಸಿಸಿಎಫ್ ವಸಂತ ರೆಡ್ಡಿ, ಡಿಎಫ್ಓ ಅಜ್ಜಯ್ಯ ಸ್ಥಳ ಪರಿಶೀನೆ ನಡೆಸಿದ್ದಾರೆ.
ಅರಣ್ಯದಲ್ಲಿ ಯಾವುದೋ ಕಾಡು ಪ್ರಾಣಿಯೊಂದಿಗೆ ಕಾದಾಟವಾಡಿ ನಿಶ್ಯಕ್ತಿಯಿಂದ ಸಾವು ಕಂಡಿರಬಹುದು ಎಂಬ ಅನುಮಾನವಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.