ಶಂಕಿತ ಉಗ್ರ ಮಾಝ್ ಮುನೀರ್ ತಂದೆ ನಿಧನ

ಹೊಸದಿಗಂತ ವರದಿ, ಮಂಗಳೂರು:

ಉಗ್ರ ಸಂಘಟನೆಯಾದ ಐಸಿಸ್ ಜೊತೆ ನಂಟು ಹೊಂದಿದ್ದ ಆರೋಪದಡಿ ಮಂಗಳವಾರ ಶಿವಮೊಗ್ಗದಲ್ಲಿ ಬಂಧಿತನಾದ ಮಾಝ್ ಮುನೀರ್ ಅಹಮ್ಮದ್‌ನ ತಂದೆ ಮುನೀರ್ ಸಾಬ್ಜಾನ್ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

2020 ರ ನವೆಂಬರ್‌ನಲ್ಲಿ ಮಂಗಳೂರಿನ ಕೆಲವೆಡೆ ಗೋಡೆ ಬರೆಹ ಪ್ರಕರಣದಲ್ಲಿ ಮಾಝ್ ಮುನೀರ್ ಆರೋಪಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಕದ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಕೆಲವು ತಿಂಗಳ ಬಳಿಕ ಮಾಝ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ತಂದೆ-ತಾಯಿಯ ಜೊತೆ ನೆಲೆಸಿದ್ದ ಮಾಝ್ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಈತನ ತಂದೆ ಮುನೀರ್ ಸಾಬ್ಜಾನ್ ಸಾಬ್ ಕದ್ರಿ ಪೊಲೀಸರಿಗೆ ಅಂಚೆ ಮೂಲಕ ನಾಪತ್ತೆ ದೂರು ನೀಡಿದ್ದರು.

ನಿಷೇಧಿತ ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ವಿಶೇಷ ಪೊಲೀಸ್ ತಂಡವು ಮಾಝ್‌ನನ್ನು ಸೆ.20 ರಂದು ಬಂಧಿಸಿತ್ತು. ಆ ಬಳಿಕ ಮಾಝ್‌ನ ತಂದೆ ಮುನೀರ್ ಸಾಬ್ಜಾನ್ ಸಾಬ್‌ರ ಆರೋಗ್ಯ ಹದಗೆಟ್ಟಿತ್ತು. ಹಾಗಾಗಿ ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಪರಾಹ್ನದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮುನೀರ್ ಸಾಬ್ಜಾನ್ ಸಾಬ್ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!