ಹೊಸದಿಗಂತ ವರದಿ,ಮೈಸೂರು:
ವ್ಯಕ್ತಿಯೊಬ್ಬ ಚಾಕುವಿನಿಂದ ಪತ್ನಿಯನ್ನ ಮನಸೋ ಇಚ್ಛೆ ಇರಿದು ಕೊಂದು ಪೊಲೀಸರಿಗೆ ಶರಣಾದ ಘಟನೆ ಮೈಸೂರಿನ ಜಯದೇವನಗರದಲ್ಲಿ ನಡೆದಿದೆ.
ಒಡಿಸ್ಸಾ ಮೂಲದ ಕಾವೇರಿ ಗಡಾಯಿ(40) ಕೊಲೆಯಾದ ದುರ್ದೆವಿ.
ಈಕೆಯ ಪತಿ ಪ್ರಮೋದ್ ಕುಮಾರ್ ಜನಾ(43) ಕೊಲೆ ಆರೋಪಿ .ವಲಸೆ ಕಾರ್ಮಿಕರಾದ ಈ ದಂಪತಿ ಕಳೆದ 6 ತಿಂಗಳ ಹಿಂದೆ ಹರಿಯಾಣದಿಂದ ಮೈಸೂರಿಗೆ ಬಂದು ನೆಲೆಸಿದ್ದರು. ಜೆ.ಕೆ.ಟೈರ್ಸ್ನಲ್ಲಿ ಗುತ್ತಿಗೆ ಕಾರ್ಮಿಕನಾಗಿದ್ದ ಪ್ರಮೋದ್ ಕುಮಾರ್ ಜನಾ, ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಶಂಕಿಸುತ್ತಿದ್ದ. ಇದೇ ವಿಚಾರದಲ್ಲಿ ಗಲಾಟೆ ಮಾಡಿ, ಚಾಕುವಿನಿಂದ ಪತ್ನಿಗೆ ಇರಿದು ಕೊಂದು ನಂತರ ಮೇಟಗಳ್ಳಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.