ಸಸ್ಪೆಂಡ್‌ ಆಗಿದ್ದ ಇನ್ಸ್​ಪೆಕ್ಟರ್​ ನಂದೀಶ್ ಸಾವು: ಅಮಾನತಿಗೆ ಕಾರಣ ತಿಳಿಸಿದ ಸಚಿವ ಆರಗ ಜ್ಞಾನೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಎರಡು ದಿನಗಳ ಹಿಂದೆ ಅಮಾನತುಗೊಂಡಿದ್ದ ಇನ್ಸ್‌ ಪೆಕ್ಟರ್‌ ನಂದೀಶ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇದಾದ ಬಳಿಕ ಅವರು ಅಮಾನತು ಮಾಡಿರುವ ಕುರಿತು ಗೊಂದಲ ಮೂಡಿತ್ತು.

ಇದೀಗ ಇದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಹೃದಯಾಘಾತದಿಂದ ನಂದೀಶ್‌ ನಿಧನರಾಗಿದ್ದಾರೆಂದು ಮಾಹಿತಿ ಇದೆ. ಆದರೆ ಯಾವ್ಯಾವುದಕ್ಕೋ ಲಿಂಕ್​ ಮಾಡಿ ಮಾತಾಡುವುದು ಸರಿಯಲ್ಲ.

ಕ್ಯಾಬರೆ, ಇಸ್ಪೀಟ್​ ಕ್ಲಬ್, ಕ್ಯಾಸಿನೋ ಬಂದಾಗಬೇಕೆಂದು ಸೂಚನೆ ನೀಡಲಾಗಿತ್ತು. ಕೆಲವು ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಓಪನ್​ ಮಾಡುವ ಕೆಲಸ ನಡೆದಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.ಬೆಂಗಳೂರಿನಲ್ಲಿ ಅಕ್ರಮ ಚಟುವಟಿಕೆ ಬಂದ್​ ಆಗಬೇಕೆಂದು ಸೂಚನೆ ನೀಡಲಾಗಿತ್ತು. ಅಕ್ರಮ ನಡೆಯುತ್ತಿದ್ರೆ ಸ್ಥಳೀಯ ಅಧಿಕಾರಿ ಹೊಣೆಮಾಡುವಂತೆ ಹೇಳಿದ್ದೆ. ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಅಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಪಾರ್ಟಿಯಲ್ಲಿ ಸೂಡಾನ್​ ದೇಶದ 20 ಪ್ರಜೆಗಳು ಭಾಗವಹಿಸಿದ್ದರು. ಸಿಸಿಬಿ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಕಮಿಷನರ್,​ ನಂದೀಶ್ ಅವರನ್ನು​ ಅಮಾನತು ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ನನಗೆ ಮಾಹಿತಿ ನೀಡಿದ್ರು ಎಂದು ಸ್ಪಷ್ಟಪಡಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!