ಅಕ್ರಮ ಸಂಬoಧದ ಅನುಮಾನ: ಪತ್ನಿಯನ್ನೇ ಕೊಂದ ಪತಿ

ಹೊಸ ದಿಗಂತ ವರದಿ, ಹಾಸನ:

ಗದ್ದೆಯಲ್ಲಿ ಮಹಿಳೆಯನ್ನು ಮಾರಕಾಸ್ಟ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಸಕಲೇಶಪುರ ತಾಲ್ಲೂಕು ಇಬ್ಬಡಿ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ .

ಅಕ್ರಮ ಸಂಬoಧವಿರುವ ಅನುಮಾನದಿಂದ ಆಕೆಯ ಪತಿಯೇ ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಅನಿತಾ (೩೫) ಕೊಲೆಯಾದ ಮಹಿಳೆ. ಆಕೆಯ ಪತಿ ಚಂದ್ರಶೇಖರ ಬಂಧಿತ ಆರೋಪಿ. ಭಾನುವಾರ ಸಂಜೆ ಗದ್ದೆಯಲ್ಲಿ ಮಹಿಳೆಯ ಶವ ರಕ್ತಸಿಕ್ತವಾಗಿ ಬಿದ್ದಿದ್ದನ್ನು ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಆಕೆಯನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಆಕೆಯ ಪತಿ ಚಂದ್ರಶೆಖರ್ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಬಿಂಬಿಸಿದ್ದಲ್ಲದೇ, ಮೃತದೇಹ ನೋಡಿದರೂ ತನಗೂ ಅದಕ್ಕೂ ಸಂಬoಧವೇ ಇಲ್ಲವೆಂಬoತಿದ್ದ. ಹೆಂಡತಿಗೆ ಅಕ್ರಮ ಸಂಬoಧವಿದೆ ಎಂದು ಆಗಿಂದಾಗ್ಗೆ ಜಗಳ ಆಡುತ್ತಿದ್ದ ಈತನ ರಂಪಾಟವನ್ನು ಅಕ್ಕಪಕ್ಕದವರು ಗಮನಿಸಿದ್ದ ವಿಷಯ ಪೊಲೀಸರಿಗೆ ತಿಳಿದ ಹಿನ್ನೆಲೆ ಆರೋಪಿಯನ್ನು ಬಂಧಿಸಿದ್ದಾರೆ.

ಹನ್ನೆರಡು ವರ್ಷಗಳ ಹಿಂದೆ ಇವರಿಬ್ಬರ ವಿವಾಹವಾಗಿದ್ದು ಮೂವರು ಮಕ್ಕಳಿದ್ದಾರೆ. ಪತ್ನಿ ಆಗಿಂದಾಗ್ಗೆ ತವರು ಮನೆಗೆ ಹೋಗುತ್ತಿದ್ದಳು, ತನ್ನೊಂದಿಗೆ ಹೆಚ್ಚು ಕಾಲ ಇರುತ್ತಿರಲಿಲ್ಲ. ಆಕೆಗೆ ಅಕ್ರಮ ಸಂಬoಧವಿರುವ ಕಾರಣದಿಂದಲೇ ಹೀಗೆಲ್ಲ ವರ್ತಿಸುತ್ತಿದ್ದಾಳೆ ಎನ್ನುವುದು ಆರೋಪಿಯ ಅನುಮಾನ. ಇದೇ ವಿಷಯವಾಗಿ ಘಟನೆ ನಡೆದ ದಿನ ಇಬ್ಬರ ನಡುವೆ ಗಜಳವಾಗಿದ್ದು, ಮಚ್ಚಿನಿಂದ ಕೊಚ್ಚಿ ಆತನೇ ಕೊಲೆ ಮಾಡಿದ್ದಾನೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಸೋಮವಾರ ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಅಕ್ರಮ ಸಂಬoಧದ ಅನುಮಾನದಿಂದ ಆರೋಪಿ ಚಂದ್ರಶೇಖರ್ ತನ್ನ ಹೆಂಡತಿಯನ್ನು ಮಚ್ಚಿನಿಂದ ಕೊಲೆ ಮಾಡಿದ್ದಾನೆ ಎನ್ನುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆ ಆತನನ್ನು ಸಕಲೇಶಪುರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆ ವರದಿ ಹಾಗೂ ಹೆಚ್ಚಿನ ತನಿಖೆಯ ನಂತರ ಸತ್ಯಾಸತ್ಯತೆ ಬಯಲಾಗಬೇಕಿದೆ ಎಂದು ತಿಳಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!