ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಣಸೂರು ತಾಲೂಕಿನ ಪಕ್ಷಿರಾಜಪುರದ ಹಕ್ಕಿಪಿಕ್ಕಿ ಜನಾಂಗದ ಮಹಿಳೆ ಸುಡಾನ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ನಂದಿನಿ ಎಂಬವರು ಮೃತಪಟ್ಟಿದ್ದಾರೆ.
ನಂದಿನಿ ಕೆಲಸದ ನಿಮಿತ್ತ ಸುಡಾನ್‌ಗೆ ಹೋಗಿದ್ದರು ಎನ್ನಲಾಗಿದೆ. ನಂದಿನಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನಂದಿನಿಯ ಪತಿ ಮತ್ತು ಮಕ್ಕಳು ಪಕ್ಷಿರಾಜಪುರದಲ್ಲಿ ವಾಸವಾಗಿದ್ದು, ಆಕೆಯ ಮೃತದೇಹವನ್ನು ದೇಶಕ್ಕೆ ತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರಿಯನ್ನು ಭೇಟಿಯಾಗಿ ಆಗಸ್ಟ್ 17 ರಂದು ನಂದಿನಿ ಅವರ ಪಾರ್ಥಿವ ಶರೀರವನ್ನು ಹುಣಸೂರಿಗೆ ಕರೆತರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.