ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೇಶಾದ್ಯಂತ ಜನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಮಹಾತ್ಮ ಗಾಂಧಿಯವರ ಜನ್ಮದಿನಕ್ಕೂ ಒಂದು ದಿನ ಮುಂಚಿತವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರಿಗೆ ಗೌರವ ಸೂಚಿಸಬೇಕೆಂದು ಮನ್ ಕಿ ಬಾತ್’ ನ 105 ನೇ ಸಂಚಿಕೆಯಲ್ಲಿ ಹೇಳಿದ್ದರು ದೇಶದ ಜನತೆಗೆ ಕರೆ ನೀಡಿದ್ದರು.
ಅದರಂತೆ ಇಂದು (ಅಕ್ಟೋಬರ್ 1) ರಂದು ಬೆಳಿಗ್ಗೆ 10 ಗಂಟೆಯಿಂದ 11ಗಂಟೆವರೆಗೆ ದೇಶದ ಎಲ್ಲೆಡೆ ಶ್ರಮದಾನ ಕಾರ್ಯಕ್ರಮ ನಡೆಯಲಿದೆ. ಬೀದಿ, ನೆರೆಹೊರೆ ಅಥವಾ ಉದ್ಯಾನವನ, ನದಿ, ಸರೋವರ ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲೂ ಸ್ವಚ್ಛತಾ ಅಭಿಯಾನಕ್ಕೆ ಸೇರಬಹುದು. ಗಾಂಧಿ ಜಯಂತಿಯ ಸಂದರ್ಭ ಈ ಬೃಹತ್ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ‘ಒನ್ ಡೇಟ್, ಒನ್ ಅವರ್, ಟುಗೆದರ್’ ಎಂದು ಹೆಸರಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ದೇಶಾದ್ಯಂತ 6.4 ಕೋಟಿ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ 35,000 ಅಂಗನವಾಡಿಗಳು, 22,000 ಮಾರುಕಟ್ಟೆಗಳು, 7,000 ಬಸ್ ನಿಲ್ದಾಣಗಳು, 1,000 ಗೋಶಾಲೆಗಳು ಮತ್ತು 300 ಪ್ರಾಣಿಗಳ ಪ್ರದರ್ಶನಗಳು ಸೇರಿವೆ. ಅಲ್ಲದೆ, ಈ ಕಾರ್ಯಕ್ರಮದ ಭಾಗವಾಗಿ, ದೇಶಾದ್ಯಂತ ಓಡುತ್ತಿರುವ 29 ವಂದೇ ಭಾರತ್ ರೈಲುಗಳನ್ನು 14 ನಿಮಿಷಗಳಲ್ಲಿ ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿದೆ. ದೆಹಲಿ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ರೈಲ್ವೇ ಸಚಿವಾಲಯದ ಅಶ್ವಿನಿ ವೈಷ್ಣವ್ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ.
ಅಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಲು ವಿಶೇಷ ಪೋರ್ಟಲ್ (nss.gov.in/swachhata-hi-seva) ಅನ್ನು ಸಹ ಪ್ರಾರಂಭಿಸಲಾಗಿದೆ. ಈ ಮೂಲಕ ಇಂತಹ ಕಾರ್ಯಕ್ರಮಗಳನ್ನು ಸರಿಯಾಗಿ ಆಯೋಜಿಸಲು ಕೇಂದ್ರ ಪ್ರಯತ್ನಿಸುತ್ತಿದೆ. ಈ ಪೋರ್ಟಲ್ ಮೂಲಕ ಏನೆಲ್ಲಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂಬುದನ್ನು ತಿಳಿದುಕೊಳ್ಳಬಹುದು.