Monday, September 26, 2022

Latest Posts

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದರ ಉತ್ತರಾಧಿಕಾರಿಯಾಗಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ನಿಧನದ ಬಳಿಕ ನೂತನ ಶಂಕರಾಚಾರ್ಯರನ್ನು ಸೋಮವಾರ ಘೋಷಿಸಲಾಯಿತು.

ಉತ್ತರ ಪ್ರದೇಶದ ವಾರಾಣಸಿಯ ಶ್ರೀ ವಿದ್ಯಾ ಮಠ ಮತ್ತು ಜ್ಯೋತಿಷಪೀಠ ಬದರಿನಾಥದ ಜವಾಬ್ದಾರಿ ಹೊತ್ತಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರನ್ನು ಉತ್ತರಾಧಿಕಾರಿಯಾಗಿ ಘೋಷಿಸಲಾಯಿತು. ಸ್ವಾಮಿ ಸದಾನಂದರನ್ನು ದ್ವಾರಕಾ ಜ್ಯೋತಿಷ ಪೀಠದ ಮುಖ್ಯಸ್ಥರನ್ನಾಗಿ ಮಾಡಲಾಗಿದೆ.

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಶಂಕರಾಚಾರ್ಯರು ಕಾಶಿಯಲ್ಲಿ ಸ್ವಾಮಿ ಸ್ವರೂಪಾನಂದ ಸರಸ್ವತಿಯ ಆದೇಶದ ಮೇರೆಗೆ ದೊಡ್ಡ ಚಳವಳಿಯ ರೂಪುರೇಷೆಗಳನ್ನು ರಚಿಸಿದ್ದರು. ಅಲ್ಲದೆ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಹತ್ತಿರದ ಶಿಷ್ಯ ಎಂದು ಪರಿಗಣಿಸಲಾಗಿದೆ. ಹೀಗಾಗಿ ಶ್ರೀ ವಿದ್ಯಾ ಮಠದ ಜವಾಬ್ದಾರಿಯನ್ನು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ನಿರ್ವಹಿಸಲಿದ್ದಾರೆ.

ಗಂಗಾನದಿಯ ದಂಡೆಯ ಹರಿಶ್ಚಂದ್ರ ಘಾಟ್ ಪಕ್ಕದಲ್ಲಿರುವ ಈ ಆಶ್ರಮದ ಜವಾಬ್ದಾರಿಯನ್ನು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ನೀಡಲಾಗಿದೆ. ಇದಲ್ಲದೇ ಶಂಕರಾಚಾರ್ಯರ ಪರವಾಗಿ ಸ್ವಾಮಿ ಅವಿಮುಕ್ತೇಶ್ವರಾನಂದರು ಆಗಲೇ ಜ್ಯೋತಿರ್ಮಠ ಬದರಿನಾಥರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಸೋಮವಾರ ಶಂಕರಾಚಾರ್ಯರ ಪ್ರತಿನಿಧಿಯಾಗಿ ಸ್ವಾಮಿ ಅವಿಮುಕ್ತೇಶ್ವರಾನಂದರ ಹೆಸರು ಘೋಷಣೆಯಾದ ಬೆನ್ನಲ್ಲೇ ಕಾಶಿಗೆ ಇಂಥದ್ದೊಂದು ಹೆಮ್ಮೆ ಸಿಕ್ಕಿದ ಖುಷಿಯೂ ವ್ಯಕ್ತವಾಗುತ್ತಿದೆ.

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಯಾರು?

ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ವಾಸಿಸುತ್ತಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯ ಹಳೆಯ ಹೆಸರು ಉಮಾಕಾಂತ್ ಪಾಂಡೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದು, ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು ಚಿಕ್ಕ ವಯಸ್ಸಿನಲ್ಲೇ ನಿವೃತ್ತಿ ಪಡೆದರು.ಬಳಿಕ ಅವರು ವಾರಾಣಸಿಯ ಶ್ರೀ ವಿದ್ಯಾ ಮಠಕ್ಕೆ ಬಂದು, ಬ್ರಹ್ಮಚಾರಿ ಶಿಕ್ಷಣವನ್ನು ಪಡೆದರು. ಇಲ್ಲಿ ಅವರನ್ನು ಬ್ರಹ್ಮಚಾರಿ ಆನಂದ್ ಸ್ವರೂಪ್ ಎಂದು ಹೆಸರಿಸಲಾಯಿತು. ಆದರೆ, ನಂತರ ಅವರು ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರಿಂದ ಶಿಕ್ಷಣ ಪಡೆದರು ಮತ್ತು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಎಂದು ಹೆಸರು ಪಡೆದರು.

ರೂಪಾನಂದರಿಂದ ಶಿಕ್ಷಣ ಪಡೆದ ನಂತರ, ಅವರ ಹತ್ತಿರದ ಶಿಷ್ಯರಲ್ಲಿ ಒಬ್ಬರಾದರು. 2008 ರಲ್ಲಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಗಂಗಾ ಸೇವಾ ಅಭಿಯಾನವನ್ನು ಘೋಷಿಸಿದಾಗ, ವಾರಾಣಸಿಯಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಈ ಚಳವಳಿಯ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಿದ್ದರು.112 ದಿನಗಳ ಕಾಲ ಕಾಶಿಯಲ್ಲಿ ಆಮರಣಾಂತ ಉಪವಾಸವನ್ನು ಮಾಡಿದ್ದರು. ಬಳಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತು. ಅಲ್ಲಿ ಅವರು ಸ್ವಾಮಿ ಸ್ವರೂಪಾನಂದರ ಸೂಚನೆಯ ಮೇರೆಗೆ ಉಪವಾಸವನ್ನು ಕೊನೆಗೊಳಿಸಿದರು.

ಇದಲ್ಲದೇ, ಅವರು ಇತ್ತೀಚೆಗೆ ವಾರಾಣಸಿಯಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಪ್ರಾರಂಭಿಸಲಾದ ಚಳವಳಿಯ ಸಂಪೂರ್ಣ ರೂಪುರೇಷೆಯನ್ನೂ ಸಿದ್ಧಪಡಿಸಿದರು. ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಮಾರ್ಗದರ್ಶನದಲ್ಲಿ ರಾಮಲಾಲಾಗೆ ಸುವರ್ಣ ಮಂದಿರವನ್ನು ನಿರ್ಮಿಸುವ ಕೆಲಸವೂ ಪೂರ್ಣಗೊಂಡಿದೆ.

ವಾರಣಾಸಿಯಲ್ಲಿ ಶ್ರೀ ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಕಾಮಗಾರಿ ಆರಂಭವಾದಾಗ, ದೇವಸ್ಥಾನ ಕೆಡವಿದಾಗ ಪ್ರತಿಭಟನೆ ಸಹ ಮಾಡಿದ್ದರು. ಅಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಸಂಪೂರ್ಣ ಚಳವಳಿಯ ರೂಪುರೇಷೆ ಸಿದ್ಧಪಡಿಸಿ, ಪ್ರತಿಭಟನೆ ಮಾಡಿದ್ದರು. ಅಷ್ಟೇ ಅಲ್ಲ, ಜ್ಞಾನವಾಪಿಯಲ್ಲಿ ಸಿಕ್ಕ ಶಿವಲಿಂಗಕ್ಕೆ ಅಭಿಷೇಕ ಮಾಡುವಂತೆ ಒತ್ತಾಯಿಸಿ ಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿ, ಅಲ್ಲಿಗೆ ತೆರಳಿ ಶಿವಲಿಂಗಕ್ಕೆ ಅಭಿಷೇಕ ಮಾಡುವಂತೆ ಹೇಳಿದಾಗ ಪೊಲೀಸರು ಅವರನ್ನು ತಡೆದಿದ್ದರು.

2015 ರಲ್ಲಿ ಗಣೇಶ ಮೂರ್ತಿ ನಿಮಜ್ಜನಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದ ನಂತರ ಪ್ರಾರಂಭವಾದ ವಿವಾದದಲ್ಲಿ, ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.

ಕಾಶಿಯಲ್ಲಿ ಧರ್ಮ ಸಂಸದ್ ಈ ಕಾರ್ಯಕ್ರಮಗಳಲ್ಲದೇ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ರಾಮಮಂದಿರ ಸೇರಿದಂತೆ ಇತರ ವಿಷಯಗಳ ಬಗ್ಗೆ ಕಾಶಿಯಲ್ಲಿ ಧರ್ಮ ಸಂಸದ್ ಅನ್ನು ಸಹ ಆಯೋಜಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!