Sunday, August 14, 2022

Latest Posts

ಧರ್ಮ ಚಾವಡಿಯ ಸ್ವಾಮೀಜಿ ನೇಣಿಗೆ ಶರಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರ ಪಂಚಾಯತ್ ನ ಕೊಳಂಬೆ ಗ್ರಾಮದ ತಲಕಲ ಶೆಟ್ಟಿಪಾಲ್ ಎಂಬಲ್ಲಿಯ `ಧರ್ಮ ಚಾವಡಿ’ ಮಠದ ಶ್ರೀ ಕೃಷ್ಣ ದೇವಿ ಪ್ರಸಾದ ಸ್ವಾಮೀಜಿ (50) ಶುಕ್ರವಾರ ಮುಂಜಾನೆ ಮಠದ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸ್ವಾಮಿಜಿಯ ಪತ್ನಿ ಪ್ರಭಾ ಶೆಟ್ಟಿ(46) ಬಜಪೆ ಪೋಲೀಸರಿಗೆ ದೂರು ನೀಡಿದ್ದಾರೆ. ದಂಪತಿಗೆ ಪುತ್ರಿಯೊಬ್ಬಳಿದ್ದಾಳೆ.ಹೋಟೆಲ್ ಉದ್ಯಮ ನಡೆಸುತ್ತಿದ್ದ ದೇವಿಪ್ರಸಾದ್ ಶೆಟ್ಟಿ ಅವರು ಸುಮಾರು 5 ವರ್ಷದ ಹಿಂದೆ ಸಂಸಾರವನ್ನು ತ್ಯಜಿಸಿ ಸನ್ಯಾಸಿ ದೀಕ್ಷೆ ಪಡೆದುಕೊಂಡ ಬಳಿಕ ತಲಕಲದಲ್ಲಿನ ತಮ್ಮ ವಿಶಾಲವಾದ ಜಾಗದಲ್ಲಿ ಧರ್ಮ ಚಾವಡಿ ಸ್ಥಾಪಿಸಿ,ಮಠದಲ್ಲೇ ವಾಸಿಸುತ್ತಿದ್ದರು.

ಶುಕ್ರವಾರ ಮುಂಜಾನೆ ದೇವರಿಗೆ ಪೂಜೆ ಮಾಡಿದ ಬಳಿಕ ಸ್ವಾಮೀಜಿಯವರು ಕೋಣೆಯೊಳಗಡೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬಜಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳೆದ ವರ್ಷ ಧರ್ಮ ಚಾವಡಿಯಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಅದ್ದೂರಿಯ ಪೂಜಾ ಕಾರ್ಯಕ್ರಮವೊಂದು ನಡೆದಿತ್ತು. ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಯವರು ಮಠಕ್ಕೆ ಬರುವ ಭಕ್ತರ ಭವಿಷ್ಯ ನುಡಿಯುತ್ತಿದ್ದು, ಹೆಚ್ಚು ಜನಪ್ರಿಯರಾಗಿದ್ದರು ಎನ್ನಲಾಗಿದ್ದು, ಧರ್ಮ ಚಾವಡಿಯ ಹೆಸರಲ್ಲಿ ಅಪಾರ ಪ್ರಮಾಣದ ಆಸ್ತಿ ಇದೆ ಎನ್ನಲಾಗಿದೆ.ವ್ಯವಹಾರಿಕವಾಗಿ ಜುಗುಪ್ಸೆ ಗೊಂಡು ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss