ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಿಶಾ ಭಾರತ್ ಸಂಸ್ಥೆಯ ನನ್ನ ಭಾರತ ಅಭಿಯಾನದ ಅಂಗವಾಗಿ ಆ.13ರಂದು ಬೆಳಗ್ಗೆ 7.30ಕ್ಕೆ ಲಾಲ್ಬಾಗ್ ಪಶ್ಚಿಮದ್ವಾರದ ಆವರಣದಿಂದ ಸ್ವರಾಜ್ಯ ವಾಕಥಾನ್ ಹಮ್ಮಿಕೊಳ್ಳಲಾಗಿದೆ.
ದಿಶಾ ಭಾರತ್ ವತಿಯಿಂದ ಯುವಕರಲ್ಲಿ ಪ್ರೇರಣೆ, ಕ್ರಾಂತಿಕಾರಿಗಳ ಕುರಿತು ಆದರ್ಶ, ದೇಶದ ಬಗ್ಗೆ ಸ್ವಾಭಿಮಾನ ಮೂಡಿಸುವ ಸಲುವಾಗಿ ಲಾಲ್ಬಾಗ್ ಪಶ್ಚಿಮದ್ವಾರದ ಆವರಣದಿಂದ ರಾಮಕೃಷ್ಣ ಆಶ್ರಮದ ವೃತ್ತದವರೆಗೆ ಕಾಲ್ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.