ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: AAP ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಕಂಗನಾ ರಣಾವತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಮುಖ್ಯಮಂತ್ರಿ ನಿವಾಸದಲ್ಲಿ ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಭಾರತೀಯ ಜನತಾ ಪಕ್ಷದ ನಾಯಕಿ ಕಂಗನಾ ರಣಾವತ್, ಎಎಪಿ ನಾಯಕರಿಗೆ ಯಾವುದೇ ಚಾರಿತ್ರ್ಯವಿಲ್ಲ ಅವರು ನೈತಿಕ ಆಧಾರದ ಮೇಲೆ ರಾಜಕೀಯವನ್ನು ತೊರೆಯಬೇಕು ಎಂದು ಹೇಳಿದರು.

“ಇದು ದುರದೃಷ್ಟಕರ, ಈ ಜನರಿಗೆ ಯಾವುದೇ ಚಾರಿತ್ರ್ಯವಿಲ್ಲ. ಹಲವಾರು ಹಗರಣಗಳನ್ನು ಮಾಡಿ ಜೈಲಿಗೆ ಹೋದ ನಂತರ ಅವರು ತಮ್ಮ ಹುದ್ದೆಯನ್ನು ಬಿಡಲು ಸಿದ್ಧರಿಲ್ಲ, ಅವರು ನೈತಿಕ ಆಧಾರದ ಮೇಲೆ ರಾಜಕೀಯವನ್ನು ಬಿಡಬೇಕು.” ಎಂದು ಕಂಗನಾ ರನೌತ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!