Tuesday, March 28, 2023

Latest Posts

ಜಾಗತಿಕವಾಗಿ 8,500 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಸ್ವೀಡಿಷ್ ಟೆಲಿಕಾಂ ದೈತ್ಯ ಎರಿಕ್ಸನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟೆಲಿಕಾಂ ಉಪಕರಣ ತಯಾರಕ ಎರಿಕ್ಸನ್ ತನ್ನ ವೆಚ್ಚವನ್ನು ಕಡಿತಗೊಳಿಸುವ ಯೋಜನೆಯ ಭಾಗವಾಗಿ ಜಾಗತಿಕವಾಗಿ 8,500 ಉದ್ಯೋಗಿಗಳನ್ನು ವಜಾಗೊಳಿಸಲಿದೆ.
ಈ ಕುರಿತು ಕಂಪನಿಯು ತನ್ನ ಉದ್ಯೋಗಿಗಳಿಗೆ ಮೆಮೊವೊಂದನ್ನು ಕಳಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಜಾಗತಿಕವಾಗಿ ಟೆಕ್ ಕಂಪನಿಗಳು ಆರ್ಥಿಕ ಪರಿಸ್ಥಿತಿಗಳನ್ನು ಉಲ್ಲೇಖಿಸಿ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡುತ್ತಿವೆ, ಪ್ರಸ್ತುತ ಎರಿಕ್ಸನ್‌ ವಜಾಗೊಳಿಸುವಿಕೆಯು ಟೆಲಿಕಾಂ ಉದ್ಯಮದ ಅತಿದೊಡ್ಡ ವಜಾಗೊಳಿಸುವಿಕೆ ಎನ್ನಲಾಗಿದೆ.

ಸ್ಥಳೀಯ ದೇಶಗಳಲ್ಲಿನ ಚಾಲ್ತಿಯಲ್ಲಿರುವ ಪದ್ಧತಿಗೆ ಅನುಗುಣವಾಗಿ ಕಡಿತಗಳನ್ನು ನಿರ್ಧರಿಸಲಾಗುತ್ತದೆ. ಹಲವಾರು ದೇಶಗಳಲ್ಲಿ ಎಷ್ಟು ಕಡಿತಗಳಾಗಲಿವೆ ಎಂಬುದನ್ನು ಈಗಾಗಲೇ ತಿಳಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಬೋರ್ಜೆ ಎಖೋಮ್ ಮೆಮೊದಲ್ಲಿ ಉಲ್ಲೇಖಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!