ಗೋಧಿ ಹಿಟ್ಟು
ರವೆ
ತುಪ್ಪ
ಬೆಲ್ಲ
ಏಲಕ್ಕಿ ಪುಡಿ
ಗೋಡಂಬಿ, ಬಾದಾಮಿ, ಪಿಸ್ತಾ
ಗಸಗಸೆ
ಗೋಧಿ ಹಿಟ್ಟು, ರವೆ ಮತ್ತು ೩-೪ ಚಮಚ ಬಿಸಿ ತುಪ್ಪ ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ನಾದಿ ಇಟ್ಟುಕೊಳ್ಳಿ. ಕಲಸಿದ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆ ಮಾಡಿ, ಮುಷ್ಟಿಯಲ್ಲಿ ಒತ್ತಿ. ಈಗ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಕಡಿಮೆ ಉರಿಯಲ್ಲಿ ಈ ಉಂಡೆಗಳನ್ನು ಸಣ್ಣ ಉರಿಯಲ್ಲಿ ಕರಿಯಿರಿ. ಕರಿದ ಉಂಡೆಗಳನ್ನು ತಣ್ಣಗಾದ ಮೇಲೆ, ಕೈಯಲ್ಲೇ ಸಣ್ಣಗೆ ಪುಡಿ ಮಾಡಿ, ಆಮೇಲೆ ಮಿಕ್ಸಿಗೆ ಹಾಕಿ ಒಂದು ಸುತ್ತು ತಿರುಗಿಸಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ೨-೩ ಚಮಚ ತುಪ್ಪ ಹಾಕಿ, ಕುಟ್ಟಿದ ಬೆಲ್ಲ ಹಾಕಿ. ಬೆಲ್ಲ ಕರಗಿದರೆ ಸಾಕು, ಯಾವುದೇ ಗಟ್ಟಿ ಪಾಕ ಬರೋದು ಬೇಡ. ಪುಡಿ ಮಾಡಿದ ಹಿಟ್ಟಿಗೆ ಏಲಕ್ಕಿ ಪುಡಿ, ಹೆಚ್ಚಿದ ಡ್ರೈ ಫ್ರೂಟ್ಸ್ ಮತ್ತು ಕರಗಿಸಿದ ಬೆಲ್ಲ-ತುಪ್ಪದ ಮಿಶ್ರಣ ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಬಿಸಿ ಇರುವಾಗಲೇ ಸಣ್ಣ ಸಣ್ಣ ಉಂಡೆಗಳನ್ನಾಗಿ ಕಟ್ಟಿ. ಕೊನೆಗೆ ಗಸಗಸೆಯಲ್ಲಿ ಒಮ್ಮೆ ಉರುಳಿಸಿದರೆ ಚುರ್ಮಾ ಲಾಡು ರೆಡಿ!



