ಸ್ವೀಟ್‌ ಕಾರ್ನ್‌ ವೆಜ್‌ ರೋಲ್‌ ಹೀಗೆ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು:

ಗೋಧಿ ಹಿಟ್ಟು: ಎರಡು ಕಪ್,
ಸ್ವೀಟ್ ಕಾರ್ನ್: ಅರ್ಧ ಕಪ್,
ಈರುಳ್ಳಿ: ಚಿಕ್ಕದು,
ತುರಿದ ಕ್ಯಾಪ್ಸಿಕಂ, ಕ್ಯಾರೆಟ್: ಅರ್ಧ ಕಪ್,
ಸೋಯಾ ಸಾಸ್: ಕಾಲು ಚಮಚ,
ಚಿಲ್ಲಿ ಸಾಸ್: ಒಂದು ಚಮಚ,
ಅಜಿನಮೊಟೊ: ಚಿಟಿಕೆ,
ಮೆಣಸು ಪುಡಿ: ಚಿಟಿಕೆ,
ಟೊಮೆಟೊ ಸಾಸ್: ಒಂದು ಚಮಚ ,
ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು,
ಮೆಣಸಿನಕಾಯಿ: ಎರಡು
ಎಣ್ಣೆ

ಮಾಡುವ ವಿಧಾನ:

ಗೋಧಿ ಹಿಟ್ಟಿಗೆ ಚಿಟಿಕೆ ಉಪ್ಪು ಹಾಕಿ, ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹಾಗೆ ಕಲಸಿ ಪಕ್ಕಕ್ಕೆ ಇಡಿ. ಸ್ವೀಟ್ ಕಾರ್ನ್ ಅನ್ನು ಸ್ಟೀಮ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ಮೃದುವಾಗುವವರೆಗೆ ಹುರಿಯಿರಿ. ನಂತರ ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಅನ್ನು ತುರಿದು ಫ್ರೈ ಮಾಡಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೇಟೊ ಸಾಸ್, ಬೇಕಾದಷ್ಟು ಉಪ್ಪು, ಅಜಿನಮೊಟೊ, ಪೆಪ್ಪರ್ ಪೌಡರ್, ಕೊತ್ತಂಬರಿ ಸೊಪ್ಪು ಹಾಕಿ ಮತ್ತೆರಡು ನಿಮಿಷ ಮಿಕ್ಸ್ ಮಾಡಿ. ಹಿಟ್ಟಿನಿಂದ ಚಪಾತಿ ತಯಾರಿಸಿ, ಬಿಸಿಬಿಸಿ ಚಪಾತಿಯ ಮಧ್ಯದಲ್ಲಿ ಮಿಶ್ರಣವನ್ನು ಹಾಕಿ ರೋಲ್ ನಂತೆ ಸುತ್ತಿಕೊಂಡರೆ ಕಾರ್ನ್ ವೆಜ್ ರೋಲ್ ರೆಡಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!