ರೈತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ: ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಳಕ್ಕೆ ಸಮ್ಮತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದ್ದು, ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
ಪ್ರಧಾನಿಮೋದಿ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬೆಲೆ ಏರಿಕೆಯಾಗ್ಬೋದು ಅನ್ನೋ ಆತಂಕದಲ್ಲಿದ್ದ ರೈತರಿಗೆ ನೆಮ್ಮದಿ ಸಿಕ್ಕಂತಾಗಿದೆ.
ಇದರ ಜೊತೆಗೆಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ʼಗೆ ಕೇಂದ್ರ ಸಚಿವ ಸಂಪುಟವು 820 ಕೋಟಿ ಆರ್ಥಿಕ ಬೆಂಬಲಕ್ಕೆ ಅನುಮೋದನೆ ನೀಡಿದೆ .
ಇಂಡಿಯಾ ಪೋಸ್ಟ್ಸ್ ಪೇಮೆಂಟ್ಸ್ ಬ್ಯಾಂಕ್ (IPPB) ಇತ್ತೀಚೆಗೆ ತನ್ನ ಕಾರ್ಯಾಚರಣೆಯ ಪ್ರಾರಂಭದ ಮೂರರಲ್ಲಿ ತನ್ನ 5 ಕೋಟಿ ಗ್ರಾಹಕರ ಗಡಿಯನ್ನ ದಾಟಿ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪಾವತಿ ಬ್ಯಾಂಕ್ಗಳಲ್ಲಿ ಒಂದಾಗಿದೆ. ಈ ಹಿನ್ನೆಲೆ ಆರ್ಥಿಕ ಬೆಂಬಲಕ್ಕೆ ಅನುಮೋದನೆ ನೀಡಿದೆ .
ಐಪಿಪಿಬಿ ತನ್ನ 1.36 ಲಕ್ಷ ಅಂಚೆ ಕಚೇರಿಗಳ ಮೂಲಕ ಡಿಜಿಟಲ್ ಮತ್ತು ಕಾಗದರಹಿತ ರೀತಿಯಲ್ಲಿ ಈ ಐದು ಕೋಟಿ ಖಾತೆಗಳನ್ನ ತೆರೆದಿದೆ, ಅದರಲ್ಲಿ 1.20 ಲಕ್ಷವು ಸುಮಾರು 1.47 ಲಕ್ಷ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವಾ ಪೂರೈಕೆದಾರರ ಸಹಾಯದಿಂದ ಗ್ರಾಮೀಣ ಪ್ರದೇಶಗಳಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!