SWEET | ಸಿಹಿಯಾದ ಹಲಸಿನ ಹಣ್ಣಿನ ಪಾಯಸ ಎಂದಾದರೂ ಟ್ರೈ ಮಾಡಿದ್ದೀರಾ? ಇಂದೇ ರೆಸಿಪಿ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಯಸ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಸಿಹಿಯಾದ ಪಾಯಸ ಅಂದ್ರೆ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಆದರೆ ನೀವು ಎಂದಾದರೂ ಹಲಸಿನ ಹಣ್ಣಿನ ಪಾಯಸ ಟ್ರೈ ಮಾಡಿದ್ದೀರಾ? ಜಾಕ್‌ಫ್ರೂಟ್ ಪಾಯಸ ಮಾಡುವುದು ಹೇಗೆ ಎಂದು ಇಲ್ಲಿದೆ ರೆಸಿಪಿ, ಒಮ್ಮೆ ಪ್ರಯತ್ನಿಸಿ ನೋಡಿ.

ರುಚಿಯಾದ ಹಲಸಿನ ಹಣ್ಣಿನ ಪಾಯಸ ಮಾಡುವ ವಿಧಾನ | Kannada Dunia | Kannada News | Karnataka News | India News

ಬೇಕಾಗುವ ಸಾಮಗ್ರಿಗಳು:

ಹೆಸರುಬೇಳೆ- ¾ ಕಪ್
ಹಲಸಿನಹಣ್ಣಿನ ತೊಳೆ- 10
ಕಾಯಿ ತುರಿ- 1 ಕಪ್
ಬೆಲ್ಲ- 1 ಕಪ್
ದ್ರಾಕ್ಷಿ- 6
ಗೋಡಂಬಿ- 8
ಏಲಕ್ಕಿ – ಸ್ವಲ್ಪ
ತುಪ್ಪ – 2 ಟೇಬಲ್ ಸ್ಪೂನ್

JACKFRUIT PAYASAM RECIPE / HALASINA HANNINA PAYASA / CHAKKA PAYASAM - Cook with Smile

ಹಲಸಿನ ಹಣ್ಣಿನ ಪಾಯಸ ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಹೆಸರುಬೇಳೆ ಹಾಕಿ ಹುರಿದುಕೊಂಡು ಚೆನ್ನಾಗಿ ತೊಳೆಯಿರಿ. ನಂತರ ಒಂದು ಕುಕ್ಕರ್ ಗೆ ಹಾಕಿ 1 ಕಪ್ ನೀರು ಹಾಕಿ 4 ವಿಷಲ್ ಕೂಗಿಸಿಕೊಳ್ಳಿ. ತಣ್ಣಗಾದ ನಂತರ ಬೇಳೆಯನ್ನು ಮೆತ್ತಗಾಗುವವರೆಗೆ ಮಿಕ್ಸ್ ಮಾಡಿಕೊಳ್ಳಿ.

ನಂತರ ಬೆಲ್ಲವನ್ನು ಪ್ಯಾನ್‌ಗೆ ಹಾಕಿ, ¾ ಕಪ್ ನೀರು ಸೇರಿಸಿ ಮತ್ತು ಕರಗಿಸಿಕೊಳ್ಳಿ. ನಂತರ ಸಂಸ್ಕರಿಸದ ನೀರನ್ನು ಸೋಸಿಕೊಳ್ಳಿ. ಹಲಸಿನಹಣ್ಣಿನ ತೊಳೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ ಅದಕ್ಕೆ ಬೇಯಿಸಿದ ಬೇಳೆ, ಬೆಲ್ಲದ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ.

ಅದು ತುಂಬಾ ದಪ್ಪವಾಗಿದ್ದರೆ, ಅಗತ್ಯವಿದ್ದರೆ ನೀರು ಸೇರಿಸಿ, ಬೇಯಿಸಿ. ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ತುರಿದ ತೆಂಗಿನಕಾಯಿ ಸೇರಿಸಿ, 3 ನಿಮಿಷ ಬೇಯಿಸಿ. ನಂತರ ಏಲಕ್ಕಿ ಪುಡಿ ಹಾಕಿ. ಅಂತಿಮವಾಗಿ, ಗೋಡಂಬಿ ದ್ರಾಕ್ಷಿಯನ್ನು ತುಪ್ಪದಲ್ಲಿ ಫ್ರೈ ಮಾಡಿ ರುಚಿಕರವಾದ ಹಲಸಿನ ಹಣ್ಣಿನ ಪಾಯಸ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!