ಮೊಸರು ಬಳಸಿ ಮಾಡುವ ಸಿಹಿ ತಿನಿಸುಗಳಲ್ಲಿ ಬಂಗಾಳದ ಭಾಪಾ ದೋಯಿ ತುಂಬಾ ವಿಶೇಷ. ಆವಿಯಲ್ಲಿ ಬೇಯಿಸಿ ಮಾಡುವ ಈ ಡೆಸರ್ಟ್ ತಿನ್ನಲು ತುಂಬಾ ಮೃದುವಾಗಿದ್ದು, ಚೀಸ್‌ಕೇಕ್‌ನಂತಹ ನಯವಾದ ಟೆಕ್ಸ್ಚರ್ ಹೊಂದಿರುತ್ತದೆ. ಊಟದ ಬಳಿಕ ತಂಪಾಗಿ ಸವಿದರೆ ಮನಸ್ಸು ಫ್ರೆಶ್ ಆಗುವಷ್ಟು ರುಚಿ ಕೊಡುತ್ತದೆ.
ಬೇಕಾಗುವ ಪದಾರ್ಥಗಳು
ಗಟ್ಟಿಯಾದ ಮೊಸರು – 1 ಕಪ್
ಹಾಲು – ½ ಕಪ್
ಏಲಕ್ಕಿ ಪುಡಿ – ½ ಟೀ ಸ್ಪೂನ್
ಕೇಸರಿ ಹಾಲು – ಸ್ವಲ್ಪ (ಐಚ್ಛಿಕ)
ಗೋಡಂಬಿ, ಬಾದಾಮಿ, ಪಿಸ್ತಾ – ಅಲಂಕಾರಕ್ಕೆ
ಮಾಡುವ ವಿಧಾನ
ಮೊದಲು ಮೊಸರನ್ನು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿ ಸುಮಾರು 30 ನಿಮಿಷದಿಂದ 1 ಗಂಟೆಯವರೆಗೆ ನೇತುಹಾಕಿ ಅದರಲ್ಲಿರುವ ನೀರನ್ನು ಬಸಿದು ಗಟ್ಟಿಯಾಗಿಸಿಕೊಳ್ಳಿ.
ನಂತರ ಒಂದು ಬೌಲ್‌ಗೆ ಈ ಗಟ್ಟಿಯಾದ ಮೊಸರು, ಹಾಲು ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಬೇಕಿದ್ದರೆ ಸ್ವಲ್ಪ ಕೇಸರಿ ಹಾಲು ಸೇರಿಸಿದರೆ ಬಣ್ಣ ಮತ್ತು ಸುವಾಸನೆ ಎರಡೂ ಚೆನ್ನಾಗಿರುತ್ತವೆ.
ಈ ಮಿಶ್ರಣವನ್ನು ತುಪ್ಪ ಸವರಿದ ಬಟ್ಟಲಿಗೆ ಸುರಿದು ಮೇಲ್ಭಾಗವನ್ನು ಫಾಯಿಲ್‌ನಿಂದ ಮುಚ್ಚಿ. ಬಳಿಕ ಸ್ಟೀಮರ್‌ನಲ್ಲಿ 15ರಿಂದ 20 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ.
ತಣ್ಣಗಾದ ನಂತರ ಫ್ರಿಜ್‌ನಲ್ಲಿ ಕನಿಷ್ಠ 2 ಗಂಟೆಗಳ ಕಾಲ ಇಡಿ. ಬಳಿಕ ಮೇಲೆ ಡ್ರೈ ಫ್ರೂಟ್ಸ್ ಹಾಕಿ ತಂಪಾಗಿ ಸವಿಯಿರಿ.



