Sunday, October 2, 2022

Latest Posts

ನಟ ಮೋಹನ್‌ ಲಾಲ್ ಅಭಿಮಾನಿಗೆ ಸಿಹಿ ಸುದ್ದಿ: ಬರಲಿದೆ ದೃಶ್ಯಂ 3 ಸಿನಿಮಾ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮಲಯಾಳಂ ಚಿತ್ರ ದೃಶ್ಯಂ 2 ಯಶಸ್ಸಿನ ನಂತರ ನಿರ್ದೇಶಕ ಜೀತು ಜೋಸೆಫ್ ನಟ ಮೋಹನ್‌ ಲಾಲ್ ಅವರೊಂದಿಗೆ ಮತ್ತೆ ಒಂದಾಗಿ ದೃಶ್ಯಂ 3 ಸಿನಿಮಾ ಮಾಡಲು ಸಜ್ಜಾಗಿದ್ದಾರೆ.
ಈ ಬಗ್ಗೆ ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಅವರು ಶನಿವಾರ ನಡೆದ ಮಜವಿಲ್ ಎಂಟರ್‌ಟೈನ್‌ಮೆಂಟ್ ಅವಾರ್ಡ್ಸ್‌ನಲ್ಲಿ ದೃಶ್ಯಂ 3 ಸಿನಿಮಾ ಬಗ್ಗೆ ಅಧಿಕೃತವಾಗಿ ಘೋಷಿಸಿದರು.
ಮಲಯಾಳಂ ನಟ ಮೋಹನ್ ಲಾಲ್ ಅಭಿನಯದ ದೃಶ್ಯಂ 2 ಸಿನಿಮಾ 2021ರ ಫೆಬ್ರವರಿಯಲ್ಲಿ ಅಮೆಜಾನ್ ಪ್ರೈಮ್​​​​​ನಲ್ಲಿ ನೇರವಾಗಿ ಬಿಡುಗಡೆಯಾಗುವುದರ ಜೊತೆಗೆ ಓಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈ ಚಿತ್ರ ಈಗಾಗಲೇ ಕನ್ನಡ ಸೇರಿದಂತೆ ಇತರೆ ಭಾಷೆಗಳಿಗೂ ರಿಮೇಕ್ ಆಗಿದೆ. ಇದೀಗ ದೃಶ್ಯಂ 3 ಸಿನಿಮಾ ಬಗ್ಗೆ ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಅಧಿಕೃತ ಘೋಷಣೆ ಮಾಡಿದ್ದು, ನಟ ಮೋಹನ್‌ಲಾಲ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಜೀತು ಜೋಸೆಫ್ ಅವರೇ ನಿರ್ದೇಶಿಸಲಿರುವ ದೃಶ್ಯಂ 3ರಲ್ಲಿಯೂ ನಾಯಕ ನಟನಾಗಿ ಮೋಹನ್‌ ಲಾಲ್ ಮುಂದುವರಿಯಲಿದ್ದಾರೆ. ಚಿತ್ರತಂಡ, ಚಿತ್ರೀಕರಣದ ಬಗ್ಗೆ ಇನ್ನಷ್ಟೇ ಘೋಷಣೆ ಆಗಬೇಕಿದೆ.
2013 ರಲ್ಲಿ ದೃಶ್ಯಂ ಮೊದಲ ಭಾಗ ಬಿಡುಗಡೆಯಾಗಿತ್ತು. ಈ ಸಿನಿಮಾ ಕೂಡಾ ದೊಡ್ಡ ಮಟ್ಟಿಗೆ ಹಿಟ್ ಆಗಿತ್ತು. ಮಲಯಾಳಂನಲ್ಲಿ ‘ದೃಶ್ಯಂ 2’ ಯಶಸ್ವಿಯಾಗಿ ದೃಶ್ಯಂ 3 ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!